2018ರ ಡಿಸೆಂಬರ್ ವರೆಗೂ ಭಾರತ-ಪಾಕ್ ಗಡಿ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

Border
ಜೈಸಲ್ಮೆರ್ (ರಾಜಸ್ತಾನ), ಅ.7- ಭಯೋತ್ಪಾ ದಕರ ಒಳ ನುಸುಳುವಿಕೆ ಮತ್ತು ದಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 2018ರ ಡಿಸೆಂಬರ್ ತನಕ ಭಾರತ-ಗಡಿ ಬಂದ್ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.ಉಗ್ರರ ಚಲನ- ವಲನಗಳ ಬಗ್ಗೆ ತೀವ್ರ ನಿಗಾ ವಹಿಸಿ ಭದ್ರತೆ ಹೆಚ್ಚಿಸುವಂತೆ ಹಾಗೂ ಸಂಭವನೀಯ ದಾಳಿಗಳನ್ನು ನಿಗ್ರಹಿಸುವಂತೆ ಗಡಿ ಪ್ರದೇಶದ ಗುಜರಾತ್, ರಾಜಸ್ತಾನ, ಪಂಜಾಬ್ ಹಾಗೂ ಜಮ್ಮು-ಕಾಶ್ಮೀರ ರಾಜ್ಯಗಳಿಗೆ ಇಂದು ಸೂಚನೆ ನೀಡಿದ್ದಾರೆ.

ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ದೇಶದೊಳಗೆ ನುಸುಳಿರುವ ಬಗ್ಗೆ ಗುಪ್ತಚರ ಮೂಲಗಳ ನಿಖರ ಮಾಹಿತಿ ಹಾಗೂ ಬಿಹಾರದಲ್ಲಿ ಐವರು ಶಂಕಿತ ಉಗ್ರರ ಬಂಧನ, ನಿನ್ನೆ ಕಾಶ್ಮೀರ ಕಣಿವೆಯಲ್ಲಿ ಏಳು ಉಗ್ರರನ್ನು ಭದ್ರತಾ ಪಡೆಗಳು ಕೊಂದು ಹಾಕಿದ ಘಟನೆ ಹಿನ್ನೆಲೆಯಲ್ಲಿ ರಾಜನಾಥ್‍ಸಿಂಗ್, ಸಂಭವನೀಯ ದಾಳಿಗಳನ್ನು ಹತ್ತಿಕ್ಕಲು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ನಾಲ್ಕು ರಾಜ್ಯಗಳಿಗೆ ನಿರ್ದೇಶನ ನೀಡಿದರು.ಮರುಭೂಮಿ ರಾಜ್ಯ ರಾಜಸ್ತಾನದ ಜೈಸಲ್ಮೆರ್‍ನಲ್ಲಿ ಇಂದು ನಾಲ್ಕು ರಾಜ್ಯಗಳ ಗೃಹ ಸಚಿವರು ಸಭೆ ನಡೆಸಿದ ಸಿಂಗ್, ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿ ಉದ್ಭವಿಸಿರುವ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು. ಈ ನಾಲ್ಕು ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ಕೈಗೊಳ್ಳಬೇಕಾದ ಅಗತ್ಯ ಭದ್ರತಾ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.

ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಪಂಜಾಬ್ ಉಪಮುಖ್ಯಮಂತ್ರಿ ಸುಖ್‍ಬೀರ್‍ಸಿಂಗ್ ಬಾದಲ್, ಗುಜರಾತ್ ಗೃಹ ಸಚಿವ ಪ್ರದೀಪ್ ಸಿನ್ಹ ಜಡೇಜಾ, ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬ್ರಿಜ್‍ರಾಜ್ ಶರ್ಮ ಹಾಗೂ ಸೇನೆ ಮತ್ತು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.ಸಭೆ ನಂತರ ರಾಜನಾಥ್‍ಸಿಂಗ್ ರಾಜಸ್ತಾನದ ಜೈಸಲ್ಮೆರ್ ಮತ್ತು ಬರ್ಮಾರ್ ಜಿಲ್ಲೆಗಳ ಪಶ್ಚಿಮ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಬಿಎಸ್‍ಎಫ್  ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿ ಪರಾಮರ್ಶಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin