2019ರ ವಿಶ್ವಕಪ್‍ವರೆಗೂ ದಕ್ಷಿಣ ಆಫ್ರಿಕಾ ನಾಯಕನಾಗಿ ಎಬಿಡಿ ಮುಂದುವರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

AB-D--00-1

ಲಂಡನ್,ಜೂ.12-ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ನೀರಸ ಪ್ರದರ್ಶನ ನೀಡಿ ಲೀಗ್‍ನಲ್ಲೇ ಔಟಾಗಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಫೋಟಕ ಆಟಗಾರ ಎಬಿ ಡಿ ವಿಲಿಯರ್ಸ್ ನಾಯಕರಾಗಿ ಮುಂದುವರೆದಿದ್ದಾರೆ.   ನಿನ್ನೆ ಭಾರತ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿದ ಹರಿಣ ತಂಡ ನಾಯಕನ ಬದಲಾವಣೆ ಕೇಳಿಬರುತ್ತಿತ್ತು. ಆದರೆ ಅಲ್ಲಿನ ಕ್ರಿಕೆಟ್ ಬೋರ್ಡ್ ಸಂಸ್ಥೆ 2019ರ ಐಸಿಸಿ ಏಕದಿನ ವಿಶ್ವಕಪ್‍ವರೆಗೂ ಡಿ ವಿಲಿಯರ್ಸ್ ಅವರನ್ನು ಮುಂದುವರೆಸಲು ತೀರ್ಮಾನಿಸಿದೆ.

ನಿನ್ನೆ ಆಫ್ರಿಕಾ 8 ವಿಕೆಟ್‍ಗಳಿಂದ ಹೀನಾಯ ಸೋಲು ಅನುಭವಿಸಿದ ಬಳಿಕ ಹರಿಣಗಳ ತಂಡದ ನಾಯಕತ್ವವನ್ನು ಬದಲಾಯಿಸಬೇಕೆಂಬ ಒತ್ತಡ ಬಂದಿದ್ದವು. ಆದರೆ ಅಲ್ಲಿನ ಕ್ರಿಕೆಟ್ ಮಂಡಳಿಯು ವಿಲಿಯರ್ಸ್ ಅವರನ್ನೇ ತಂಡದ ನಾಯಕನಾಗಿ ಮುಂದುವರೆಸಿರುವ ಬಗ್ಗೆ ಇತರ ಆಟಗಾರರಾದ ಅಸೀಮ್ ಆಮ್ಲಾ, ಡಿ ಕಾಕ್ ,ಡೇವಿಡ್ ಮಿಲ್ಲರ್, ಜೆಪಿ ಡುಮಿನಿ, ಕಗೀಸಾ ರಬಡ ಸೇರಿದಂತೆ ನಾನಾ ಆಟಗಾರರು ಬೆಂಬಲ ಸೂಚಿಸಿದ್ದಾರೆ.  ಎಬಿಡಿ ವಿಲಿಯರ್ಸ್ ಅದ್ಭುತ ನಾಯಕತ್ವ ಗುಣ ಹೊಂದಿದ್ದು ಯಾವುದೇ ಸಂದರ್ಭದಲ್ಲಿ ತಂಡವನ್ನು ಹೇಗೆ ಮುನ್ನಡೆಸಬೇಕೆಂಬ ಸಾಮಥ್ರ್ಯವಿದೆ. ಹಾಗಾಗಿ ಅವರನ್ನೇ ಮುಂದುವರೆಸಲು ಸೂಕ್ತ ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ತೀರ್ಮಾನಿಸಿದೆ.

ನಾಯಕತ್ವದ ವೈಫಲ್ಯದಿಂದ ತಂಡ ಸೋಲು ಅನುಭವಿಸಿದೆ ಎಂದು ಟೀಕೆ ಮಾಡುತ್ತಾರೆ. ಪಂದ್ಯದಲ್ಲಿ ಸೋಲು-ಗೆಲುವು ಸಹಜ. ಸೋತಾಗ ಅವರನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಕ್ರಿಕೆಟ್ ಆಟಗಾರರೊಬ್ಬ ಅಭಿಪ್ರಾಯಪಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin