2020ರ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವೆ : ದೀಪಾ
ರಿಯೋ ಡಿ ಜನೈರೋ, ಆ.15- ಟೋಕಿಯೋದಲ್ಲಿ ನಡೆಯುವ 2020ರ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದೇ ಗೆಲ್ಲುವುದಾಗಿ ರಿಯೋ ಒಲಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನದೊಂದಿಗೆ ಪದಕ ವಂಚಿತ ವಾದ ಭಾರತದ ಹೆಮ್ಮೆಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಹೇಳಿದ್ದಾರೆ. ರಿಯೋದಲ್ಲಿ ಇಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ವಾಲ್ಟ್ ಫೈನಲ್ನಲ್ಲಿ ಕಂಚು ಪದಕದಿಂದ ವಂಚಿತವಾಗಿರುವ ಬಗ್ಗೆ ತಾವು ನಿರಾಶ ರಾಗಿಲ್ಲ. ಬದಲಿಗೆ ಟೋಕಿಯೋ ಒಲಂಪಿಕ್ ಕ್ರೀಡಾಕೂಟ ದಲ್ಲಿ ಚಿನ್ನ ಗೆಲ್ಲುವ ಹೆಗ್ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ಈ ಒಲಂಪಿಕ್ನಲ್ಲಿ ಪದಕ ಗೆಲ್ಲುವ ಬಗ್ಗೆ ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ನಾಲ್ಕನೇ ಸ್ಥಾನ ಪಡೆದಿದ್ದು ನನಗೆ ಹೆಮ್ಮೆಯ ಸಂಗತಿಯಾಗಿದೆ.
ಬಾಕ್ಸಿಂಗ್ ಅಥವಾ ಕುಸ್ತಿಯಲ್ಲಿ ನಾಲ್ಕನೇ ಸ್ಥಾನ ಪಡೆದರೂ ಕಂಚು ಖಚಿತ. ಆದರೆ ಜಿಮ್ನಾಸ್ಟಿಕ್ ಕ್ರೀಡೆ ಇದಕ್ಕಿಂತ ಭಿನ್ನ. ಮುಂದಿನ ನಾಲ್ಕು ವರ್ಷಗಳ ನಂತರ ಗುರಿ ಚಿನ್ನದ ಪದಕ ಗೆಲ್ಲುವುದಾಗಿದೆ ಎಂದು ದೀಪಾ ವಿಶ್ವಾಸದಿಂದ ನುಡಿದಿದ್ದಾರೆ. ಇದು ನನ್ನ ಮೊದಲ ಒಲಂಪಿಕ್. ನಾನು ನಿರಾಶೆಯಾಗುವ ಅಗತ್ಯವಿಲ್ಲ. ಟೋಕಿಯೋದಲ್ಲಿ 2020ರಲ್ಲಿ ಒಲಂಪಿಕ್ನಲ್ಲಿ ನಾನು ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ ಎಂದು ತಿಳಿಸಿದ್ದಾರೆ.
► Follow us on – Facebook / Twitter / Google+