2020ರ ವೇಳೆಗೆ ನಂ.1 ಕಿಲ್ಲರ್ ಖಾಯಿಲೆಯಾಗಲಿದೆಯೇ ಹೃದ್ರೋಗ..?

ಈ ಸುದ್ದಿಯನ್ನು ಶೇರ್ ಮಾಡಿ

Heart-Attack--01

ವಿಶ್ವದಾದ್ಯಂತ ಸಂಭವಿಸುತ್ತಿರುವ ಎಲ್ಲ ಸಾವುಗಳ ಪೈಕಿ ಶೇ.30ರಷ್ಟು ಪ್ರಮಾಣದ ಮರಣಕ್ಕೆ ಹೃದ್ರೋಗ ಪ್ರಮುಖ ಕಾರಣವಾಗಿದೆ. 2020ರ ವೇಳೆಗೆ ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೃದ್ರೋಗವು ನಂಬರ್ ಒನ್ ಕಿಲ್ಲರ್ ಆಗಲಿದೆ ಎಂದು ಊಹಿಸಲಾಗಿದೆ.   ನಮ್ಮ ಹೃದಯ ಅತ್ಯಂತ ಶಕ್ತಿಶಾಲಿ ಅಂಗ. ನಮ್ಮ ಬದುಕಿನ ಅಮೂಲ್ಯ ಆರೋಗ್ಯಕ್ಕಾಗಿ ಇದು ಹಗಲು-ರಾತ್ರಿ ವಿರಮಿಸದೆ ಕೆಲಸ ಮಾಡುತ್ತದೆ. ಆದರೆ, ಇದನ್ನು ನಾವು ಲಘುವಾಗಿ ಪರಿಗಣಿಸಿ ಹೃದಯಕ್ಕೆ ಹಾನಿ ಮಾಡುವಂಥ ಕೆಲಸಗಳನ್ನು ಮಾಡುತ್ತೇವೆ. 60 ವರ್ಷಗಳಿಗಿಂತ ಕೆಳಗೆ ಕಂಡು ಬರುವ ಹೃದ್ರೋಗಗಳಿಗೆ ನಾವು ಮಾಡುವ ತಪ್ಪುಗಳೇ ಕಾರಣ. 80 ವರ್ಷಗಳ ಬಳಿಕ ಕಾಣಿಸಿಕೊಳ್ಳುವ ಹೃದ್ರೋಗಗಳು ನೈಸರ್ಗಿಕ ಮತ್ತು ಅತಿರೋಸ್ ಸ್ಕ್ಲಿರೋಸಿಸ್ (ಧಮನಿಗಳ ಒಳಭಾಗದಲ್ಲಿ ತುಕ್ಕು ಹಿಡಿಯುವಿಕೆಯಂಥ ಸಮಸ್ಯೆ ಗಳಿಂದ ಉಂಟಾಗುವ ಹೃದ್ರೋಗ) ಈ ಕಾರಣದಿಂದ ಉಂಟಾಗುತ್ತದೆ.

ಹೃದ್ರೋಗವು ಮುಖ್ಯ ಹಂತಕ ಹಾಗೂ ನಮ್ಮ ಬದುಕನ್ನು ಬಲಹೀನ ಮಾಡುವ ದುಷ್ಟ ಭಾರತದಲ್ಲಿ 20 ದಶಲಕ್ಷಕ್ಕೂ ಅಧಿಕ ಮಂದಿ ಹೃದ್ರೋಗದಿಂದ ಬಳಲುತ್ತಿದ್ದಾರೆ ಎಂದು ಅಂದಾಜು ಮಾಡಲಾಗಿದ್ದು, ಪ್ರತಿ ವರ್ಷ 2.5 ದಶಲಕ್ಷ ಜನರು ಅಕಾಲಿಕ ಮರಣಕ್ಕೆ ಗುರಿಯಾಗುತ್ತಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಆದ ಕಾರಣ ಅದು ಮಾರಕವಾಗಿ ಪರಿಣಮಿಸುವುದಕ್ಕೂ ಮುನ್ನ ಹೃದ್ರೋಗಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಾದುದು ಮುಖ್ಯ ಸಂಗತಿಯಾಗಿದೆ.

ಹೃದ್ರೋಗಗಳಲ್ಲಿ ಹಲವು ವಿಧಗಳಿವೆ. ಹೃದಯದ ಮಾಂಸ ಖಂಡಗಳಿಗೆ ಸಾಕಷ್ಟು ಪ್ರಮಾಣದಲ್ಲಿ ರಕ್ತ ಲಭಿಸದೆ ಇರುವುದರಿಂದ ಆಂಜೈನಾ ಮತ್ತು ಹೃದಯಾಘಾತ ಉಂಟಾಗುತ್ತವೆ. ಇದನ್ನು ಸಾಮಾನ್ಯವಾಗಿ ಇಶ್ಚಿಮಿಕ್ ಹಾರ್ಟ್ ಡಿಸೀಸ್ ಎಂದು ಕರೆಯುತ್ತಾರೆ. ಅಧಿಕ ರಕ್ತದೊತ್ತಡದಿಂದ ಉಂಟಾಗುವ ಹೃದ್ರೋಗಗಳು, ಕವಾಟ ರೋಗಗಳು, ಹುಟ್ಟಿನಿಂದ ಬರುವ ಹೃದ್ರೋಗಗಳು ಇತ್ಯಾದಿ. ಹೃದಯದ ಮಾಂಸಖಂಡಗಳಿಗೆ ತಗುಲುವ ಕಾರ್ಡಿಯೋಮಿಯೋಪಥಿ, ಹೃದಯದ ಅರ್ಬುಧ ರೋಗಗಳು, ಹೃದಯ ಕವಚದ ರೋಗಗಳು, ಮಹಾಧಮನಿಯ ರೋಗಗಳು ಮುಂತಾದವು ಬಹಳ ವಿರಳವಾಗಿ ಉಂಟಾಬಹುದು. ಮೇಲೆ ತಿಳಿಸಿರುವುದರಲ್ಲಿ ಅತ್ಯಧಿಕ ರೋಗಿಗಳನ್ನು ಕಾಡುವ ರೋಗವೆಂದರೆ ಇಶ್ಚಿಮಿಕ್ ಹಾರ್ಟ್ ಡಿಸೀಸ್.

ಹೃದ್ರೋಗಕ್ಕೆ ಕಾರಣವಾಗುವ ಮುಖ್ಯ ಸಂಗತಿಗಳೆಂದರೆ ತಂಬಾಕು ಸೇವನೆ, ಧೂಮಪಾನ, ಡಯಾಬಿಟಿಸ್. ರಕ್ತದಲ್ಲಿನ ಅಧಿಕ ಕೊಬ್ಬುಅಥವಾ ಕಡಿಮೆ ರಕ್ತದೊತ್ತಡ, ಸ್ಥೂಲಕಾಯ, ಬೊಜ್ಜು ಅಥವಾ ಅಧಿಕ ತೂಕ, ಕರೋನರಿ ಆರ್ಟರಿ ಡಿಸೀಸ್‍ನ ಕೌಟುಂಬಿಕ ಹಿನ್ನೆಲೆ. ವೃದ್ದಾಪ್ಯ, ಐಷಾರಾಮಿ ಜೀವನ ಶೈಲಿ.

ಹಾರ್ಟ್ ಕೇರ್ ಟಿಪ್ಸ್:

ಜೀವನ ಶೈಲಿಯ ಬದಲಾವಣೆ ಹಾಗೂ ಆರ್ಥಿಕ ಅಭಿವೃದ್ಧಿಯಿಂದ ಕಳೆದ 20 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೃದ್ರೋಗ ಪ್ರಕರಣಗಳ ಸಂಖ್ಯೆ ಇಮ್ಮಡಿ
ಯಾಗಿದೆ. ಈ ಮಾರಕ ರೋಗಗಳನ್ನು ತಡೆಗಟ್ಟಲು ಕೆಲವು ಆರೋಗ್ಯ ಟಿಪ್ಸ್ ಅನುಸರಿಸಿದರೆ ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ.
ಸಮತೋಲನ ಆಹಾರ ಸೇವಿಸಿ. ನಿಮ್ಮ ಹೃದಯ ಆರೋಗ್ಯಕರವಾಗಿ ಮತ್ತು ಸ್ವಾಸ್ಥ್ಯದಿಂದ ಇರಲು ತಾಜ ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಧಾನ್ಯಗಳು, ಗೋಧಿ ಮತ್ತು ಅಕ್ಕಿಯಂಥ ಶರ್ಕರ ಪಿಷ್ಟ ಸಮೃದ್ದ ಆಹಾರವನ್ನು ಸೇವಿಸಿ.

ಐಷಾರಾಮಿ ಜೀವನಶೈಲಿಯಿಂದ ವಿಶ್ವಾದ್ಯಂತ ಶೇ.3ರಷ್ಟು ಕೊರೊನರಿ ಹೃದ್ರೋಗ ಹಾಗೂ ಶೇ.11ರಷ್ಟು ಪಾಶ್ರ್ವವಾಯು ಸಾವುಗಳು ಸಂಭವಿಸುತ್ತಿವೆ.
ಒತ್ತಡ ನಿಯಂತ್ರಿಸಲು ಹಾಗೂ ಹೃದಯಾಘಾತದ ಗಂಡಾಂತರ ಕಡಿಮೆ ಮಾಡಲು ಆಳವಾದ ಉಸಿರಾಟ, ಯೋಗ ಹಾಗೂ ಧ್ಯಾನ ಮೂಲ ಮಂತ್ರಗಳಾಗಿವೆ.
ನಿದ್ರಾಹೀನತೆಯಿಂದ ರಕ್ತದೊತ್ತಡ ಹಾಗೂ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗುತ್ತದೆ. ಇದು ಕೂಡ ಹೃದಯಕ್ಕೆ ಸಂಬಂಧಿಸಿದ ಗಂಡಾಂತರ ಮಟ್ಟಗಳನ್ನು ಹೆಚ್ಚಿಸುತ್ತದೆ. ನಿಮ್ಮ ಹೃದಯ ಅರೋಗ್ಯಕರವಾಗಿರಲು ರಾತ್ರಿ ವೇಳೆ 7-9 ಗಂಟೆಗಳ ನಿದ್ರೆ ಅಗತ್ಯ.
ಕೆಲವು ಆರೋಗ್ಯ ನಿಯತಕಾಲಿಕೆಗಳ ಪ್ರಕಾರ ಕೋಪ ಮತ್ತು ಒತ್ತಡವು ಹೃದಯ ಬಡಿತ ಹೆಚ್ಚಿಸುತ್ತದೆ ಹಾಗೂ ಕಾಲಕ್ರಮೇಣ ಇದು ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ. ಪ್ರತಿ ದಿನ ಯಾರು ನಾಲ್ಕೈದು ಲೀಟರ್‍ಗಳಷ್ಟು ನೀರು ಕುಡಿಯುತ್ತಾರೋ ಅವರಿಗೆ ಹೃದಯಾಘಾತಗಳು ಸಂಭವಿಸುವ ಸಾಧ್ಯತೆಗಳು ಕಡಿಮೆ ಇರುತ್ತವೆ ಎಂದು ಇತ್ತೀಚಿನ ಅಧ್ಯಯನಗಳು ಹೇಳಿವೆ.

ಆಗಾಗ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ನಿಮ್ಮ ರಕ್ತದೊತ್ತಡ, ಕೊಲೆಸ್ಟ್ರಾಲ್ ಹಾಗೂ ಟಿಜಿ ಮಟ್ಟಗಳನ್ನು ಸಾಮಾನ್ಯ ಪ್ರಮಾಣದಲ್ಲಿ ನಿಯಂತ್ರಣದಲ್ಲಿಡಬೇಕು. ಇದು ನಿಮ್ಮ ಆರೋಗ್ಯಕರ ಹೃದಯಕ್ಕೆ ಮುಖ್ಯ.  ನಿಯಮಿತ ವ್ಯಾಯಾಮ ಮಾಡುವುದರಿಂದ ಹೃದಯ ಮಾಂಸಖಂಡಗಳು ಬಲಗೊಂಡು ಹೃದಯಾಘಾತ ಕಡಿಮೆ ಮಾಡುತ್ತದೆ.   ಧೂಮಪಾನವು ಜೀವಿತಾವಧಿಯನ್ನು 15 ರಿಂದ 25 ವರ್ಷಗಳಷ್ಟು ಕಡಿಮೆ ಮಾಡುತ್ತದೆ ಹಾಗೂ ಆಲ್ಕೋಹಾಲ್ ಸೇವನೆಯು ಹೃದಯದ ಮಾಂಸಖಂಡಗಳಿಗೆ ಹಾನಿಯುಂಟು ಮಾಡಿ ರಕ್ತದೊತ್ತಡ ಹೆಚ್ಚಿಸುತ್ತದೆ.  ನಗು ಚಿಕಿತ್ಸೆ ನಿಮ್ಮ ಹೃದಯಕ್ಕೆ ಅತ್ಯುತ್ತಮವಾದ ಔಷಧ. ಪ್ರತಿದಿನ ಕೇವಲ 15 ನಿಮಿಷಗಳ ಕಾಲ ನಗುವುದರಿಂದ ನಿಮ್ಮ ರಕ್ತ ಸಂಚಾರ ಶೇ.22ರಷ್ಟು ಹೆಚ್ಚಾಗುತ್ತದೆ ಹಾಗೂ ರಕ್ತನಾಳಗಳು ದಪ್ಪವಾಗುವುದನ್ನು ತಡೆಗಟ್ಟುತ್ತದೆ.

ಸೂಕ್ತ ರೀತಿಯಲ್ಲಿ ಯೋಜನೆ ರೂಪಿಸಿದ ಹಾಗೂ ಸಂಘಟಿತ ವೇಳಾಪಟ್ಟಿಗಳು ನಿಮ್ಮ ಒತ್ತಡದ ಮಟ್ಟ ಇಳಿಸಲು ಸಹಕಾರಿ ಹಾಗೂ ನಿಮ್ಮ ಜೀವನ ಮಟ್ಟ ಸುಧಾರಿಸುತ್ತದೆ. ಸಕಾಲಿಕ ಮತ್ತು ನಿಯಮಿತ ಔಷಧಿಗಳಿಂದ ಹೃದ್ರೋಗಗಳನ್ನು ತಡೆಗಟ್ಟಬಹುದು.   ಆರೋಗ್ಯಕರ ಹೃದಯಕ್ಕಾಗಿ ಪಥ್ಯಾಹಾರ ಸೇವಿಸಬೇಕು. ಬೀಟಾ ಕ್ಯಾರೋಟೀನ್ ಸಮೃದ್ಧವಿರುವ ಆಹಾರಗಳು ಅಂದರೆ ಕ್ಯಾರೆಟ್, ಎಲೆಕೋಸು, ವಿಂಟರ್ ಸ್ಕ್ವಾಷ್, ಗೆಣಸು, ಸೊಪ್ಪುಗಳು, ಜರದಾರು ಹಣ್ಣು ಮತ್ತು ಸಮುದ್ರಪಾಚಿ. ಬೆಳ್ಳುಳ್ಳಿ ಹೃದ್ರೋಗಿಗಳಿಗೆ ದಿವ್ಯ ಔಷಧಿ. ಲೇಮನ್ ಟೀ ಸಹ ಉತ್ತಮ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin