2020 ಟೋಕಿಯೋ ಒಲಿಂಪಿಕ್ಸ್ ಗೆ ಜಪಾನ್ ತಯಾರಿ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

2020

ನವದೆಹಲಿ(ಆ.23): ಈ ಬಾರಿಯ ಒಲಿಂಪಿಕ್ಸ್ಗೆ ಭಾನುವಾರವಷ್ಟೇ ವೈಭವೋಪೇತ ತೆರೆಬಿದ್ದಿದೆ. ಸದ್ಯಕ್ಕೆ ಎಲ್ಲಾ ಅಥ್ಲೀಟ್ಗಳೂ ಬಿಡುವು ಪಡೆದಿದ್ದು, ಮುಂದಿನ ಒಲಿಂಪಿಕ್ಸ್ ಬಗ್ಗೆ ಸದ್ಯಕ್ಕೀಗ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ಮುಂದಿನ ಒಲಿಂಪಿಕ್ಸ್ ಆತಿಥ್ಯ ವಹಿಸಿರುವ ಜಪಾನ್ ಸರ್ಕಾರ ಈಗಾಗಲೇ ತಯಾರಿ ಆರಂಭಿಸಿದೆ. ಸದ್ಯ ಟೋಕಿಯೊ ಕೂಟ 2020ರ ಜುಲೈ 24ರಿಂದ ಆಗಸ್ಟ್ 9ರವರೆಗೆ ನಿಗದಿಯಾಗಿದೆ.  ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದ ಟಿಕೆಟ್ಗಳ ಸರಾಸರಿ ಬೆಲೆ 4776 ರೂಪಾಯಿಗಳಾಗಿರಲಿದೆ. ಆದರೆ, ಉದ್ಘಾಟನಾ ಸಮಾರಂಭದ ಟಿಕೆಟ್ನ ದರ ಕೊಂಚ ಹೆಚ್ಚಾಗಿರಲಿದ್ದು, ಪ್ರತಿ ಟಿಕೆಟ್ನ ಬೆಲೆ ರೂ.16,890ರಿಂದ ರೂ.1,01,419ರ ನಡುವೆ ಇರಲಿದೆ ಎಂದು ಹೇಳಲಾಗಿದೆ.

ರೋಬೋಟೆಕ್ ತಂತ್ರಜ್ಞಾನದಲ್ಲಿ ವಿಶ್ವದ ದೈತ್ಯ ಪ್ರತಿಭೆಯಾಗಿರುವ ಜಪಾನ್, ಉದ್ಘಾಟನಾ ಸಮಾರಂಭದ ಕಾವಲು ಕಾಯಲು ವಿಶೇಷ ‘ಸ್ಮಾರ್ಟ್ ರೋಬೋ’ಗಳ ಸೇನೆಯನ್ನೇ ಸಿದ್ಧಗೊಳಿಸಿದೆಯೆಂದು ‘ಇಂಡಿಯಾ ಟೈಮ್ಸ್’ ತಿಳಿಸಿದೆ. ಪ್ರೇಕ್ಷಕರಿಗೆ ತಮ್ಮ ಆಸನ, ಗ್ಯಾಲರಿಗಳನ್ನು ಆಯ್ದುಕೊಳ್ಳಲು ಮಾರ್ಗದರ್ಶನ ನೀಡುವುದರ ಜತೆಗೆ, ಇಡೀ ಕ್ರೀಡಾಂಗಣದ ಮೇಲೆ ಹದ್ದಿನ ಕಣ್ಣಿಡಲಿವೆ. ಪರಿಸರ ಸ್ನೇಹಿ ಹೆಜ್ಜೆಯಿಟ್ಟಿರುವ ಜಪಾನ್ ಸರ್ಕಾರ, ಇಡೀ ಒಲಿಂಪಿಕ್ಸ್ ವಿಲೇಜ್ ಅನ್ನು ಜಲಜನಕ ಆಧಾರಿತವಾಗಿಸಲು ಚಿಂತನೆ ನಡೆಸಿದೆ. ಇನ್ನು ಅಥ್ಲೀಟ್ಗಳು ಡ್ರೈವರ್ ಲೆಸ್ ಕಾರುಗಳಲ್ಲಿ ಸಂಚರಿಸಬಹುದಾಗಿದೆ.

ಐದು ಹೊಸ ಕ್ರೀಡೆಗಳ ಸೇರ್ಪಡೆ
ಟೋಕಿಯೊ ಕೂಟಕ್ಕೆ ಐದು ಹೊಸ ಕ್ರೀಡೆಗಳು ಸೇರ್ಪಡೆಗೊಳ್ಳಲಿವೆ. ಸದ್ಯಕ್ಕೆ 39 ಕ್ರೀಡೆಗಳಿರುವ ಪಟ್ಟಿಗೆ ಬೇಸ್ಬಾಲ್, ಕ್ಲೈಂಬಿಂಗ್, ಕರಾಟೆ, ಸ್ಕೇಟ್ ಬೋರ್ಡಿಂಗ್ ಹಾಗೂ ಸರ್ಫಿಂಗ್ ಸಹ ಸೇರ್ಪಡೆಗೊಂಡಿದೆ. 2020ರ ಒಲಿಂಪಿಕ್ಸ್ಗೆ ಸ್ಯಾಂಡಿ ನೆಟ್ಬಾಲ್, ಸ್ಕ್ವಾಷ್ , ಬ್ರಿಡ್ಜ್ ಗೇಮ್, ಚೆಸ್ ಹಾಗೂ ಸ್ನೂಕರ್ ಸೇರ್ಪಡೆಗೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin