2022ರ ವೇಳೆಗೆ ಭಾರತ ಸಂಪೂರ್ಣ ಪರಿವರ್ತನೆಗೆ ಪ್ರಧಾನಿ ಮೋದಿ ಹೆಗ್ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

modi

ನವದೆಹಲಿ, ಮೇ 28-ಭಾರತವನ್ನು 2022ರ ವೇಳೆಗೆ ಸಂಪೂರ್ಣ ಪರಿವರ್ತನೆಗೆ ಪ್ರಧಾನಿ ನರೇಂದ್ರ ಮೋದಿ ಹೆಗ್ಗುರಿಯನ್ನು ನಿಗದಿಗೊಳಿಸಿದ್ದು, ಇದಕ್ಕಾಗಿ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯೋನ್ಮುಖರಾಗಿದ್ದಾರೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಹೇಳಿದ್ದಾರೆ.   ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರವು ಭರವಸೆಗಳನ್ನು ಈಡೇರಿಸಿ ಜನರ ಅಶೋತ್ತರಗಳಿಗೆ ಸ್ಪಂದಿಸಿದೆ. ದೇಶದ ಜನರ ಪ್ರಧಾನಿಯವರನ್ನು ದೂರದೃಷ್ಟಿಯ ಮಹಾ ನಾಯಕ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅವರ ದಕ್ಷ ಮತ್ತು ಸದೃಢ ಆಡಳಿತದಲ್ಲಿ ನಂಬಿಕೆ ಇದೆ ಎಂದು ಅವರು ವಾರ್ತಾ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.ಸರ್ಕಾರವು ಅನೇಕ ಜ್ವಲಂತ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಗಡಿಯಾಚೆಗಿನ ವೈರಿಗಳೊಂದಿಗೆ ದೇಶದೊಳಗಿರುವ ಶತ್ರುಗಳ ಕಾಟವನ್ನು ಮೋದಿ ¸ರ್ಕಾರ ಮಟ್ಟ ಹಾಕುತ್ತಿದೆ. ಪ್ರಧಾನಿಯವರು ಕೈಗೊಂಡ ದಿಟ್ಟ ನಿರ್ಧಾರಗಳಿಂದ ಕಾಳಧನ, ನಕಲಿ ನೋಟು ಮತ್ತು ಭ್ರಷ್ಟಾಚಾರ-ಈ ಪಿಡುಗುಗಳಿಗೆ ಗಣನೀಯವಾಗಿ ಕಡಿವಾಣ ಹಾಕಲಾಗಿದೆ ಎಂದು ರಾಥೋಡ್ ವಿವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin