BIG NEWS : ರಾಜ್ಯದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತಿದೆ ಕೊರೋನಾ, ಇಂದು 2062 ಮಂದಿಗೆ ಪಾಸಿಟಿವ್, 54 ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 2,062 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30 ಸಾವಿರಕ್ಕೆ ಸಮೀಪವಿದೆ. ಒಟ್ಟು ಸೋಂಕಿತರ ಸಂಖ್ಯೆ 28,877ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರ ಒಂದರಲ್ಲೇ ಬುಧವಾರ 1148 ಪ್ರಕರಣಗಳು ದೃಢವಾಗಿದ್ದು ಒಟ್ಟು ಪಾಸಿಟಿವ್‌ ಕೇಸ್‌ಗಳ ಸಂಖ್ಯೆ 12509 ತಲುಪಿದೆ . ರಾಜ್ಯದಲ್ಲಿ ಸೋಂಕಿಗೆ ಇಂದು 54 ಜನರು ಅಸುನೀಗಿದ್ದಾರೆ.

ಅದರಲ್ಲಿ ಬೆಂಗಳೂರಿನಲ್ಲಿ ಇಂದು 13 ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಇದೀಗ ಕರ್ನಾಟಕದಲ್ಲಿ ಸೋಂಕಿನಿಂದ ಮೃಪಟ್ಟವರ ಒಟ್ಟು ಸಂಖ್ಯೆ 470ಕ್ಕೆ ಏರಿದೆ.

ದಕ್ಷಿಣ ಕನ್ನಡ 183, ಧಾರವಾಡ 89, ಕಲಬುರಗಿ 66, ಬಳ್ಳಾರಿ 59, ಮೈಸೂರು 59, ಬೆಂಗಳೂರು ಗ್ರಾಮಾಂತರ 37, ರಾಮನಗರ 34, ಚಿಕ್ಕಬಳ್ಳಾಪುರ 32, ಉಡುಪಿ 31, ಹಾವೇರಿ 31, ಬೀದರ್‌ 29, ಬೆಳಗಾವಿ 27, ಹಾಸನ 26, ಬಾಗಲಕೋಟೆ 24, ತುಮಕೂರು 24, ಚಿಕ್ಕಮಗಳೂರು 23, ಮಂಡ್ಯ 20, ಉತ್ತರ ಕನ್ನಡ 19, ದಾವಣಗೆರೆ 18, ರಾಯಚೂರು 17, ಶಿವಮೊಗ್ಗ 17, ಕೋಲಾರ 16, ಯಾದಗಿರಿ 11, ಕೊಪ್ಪಳ 11, ಗದಗ 5, ವಿಜಯಪುರ 4, ಚಿತ್ರದುರ್ಗದಲ್ಲಿ 2 ಪ್ರಕರಣಗಳು ದೃಢಪಟ್ಟಿವೆ.

ಬೆಂಗಳೂರು ನಗರ ಒಂದರಲ್ಲೇ ಬುಧವಾರ 13 ಮಂದಿ ಅಸುನೀಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಸೋಂಕಿಗೆ ಮೃತಪಟ್ಟವರ ಸಂಖ್ಯೆ 470ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ 168 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ.

ಬುಧವಾರ 778 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 11876 ಮಂದಿ ಸಂಪೂರ್ಣ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಆಗಿದ್ದಾರೆ. ಪ್ರಸ್ತುತ 16527 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಅಪಾಯದ ಮಟ್ಟ ತಲುಪಿದ್ದು, ಇದುವರೆಗೆ ನಗರದಲ್ಲಿ ಒಟ್ಟು 177 ಮಂದಿ ಸೋಂಕಿನಿಂದ ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ 418 ಮಂದಿ ಗುಣವಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಆಗಿದ್ದಾರೆ. ನಗರದಲ್ಲಿ ಇದುವರೆಗೆ 2228 ಜನ ಗುಣವಾಗಿದ್ದಾರೆ. ಪ್ರಸ್ತುತ 10103 ಸಕ್ರಿಯ ಪ್ರಕರಣಗಳಿವೆ.

Facebook Comments

Sri Raghav

Admin