ಇರಾನ್‍ನಲ್ಲಿ ಹಿಂಸಾಚಾರಕ್ಕೆ 208 ಜನ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ತೆಹ್ರಾನ್, ಡಿ.3- ಗ್ಯಾಸೋಲೈನ್ (ಗೃಹಬಳಕೆ ಇಂಧನ) ದರ ಏರಿಕೆ ಖಂಡಿಸಿ ಇರಾನ್ ದೇಶಾದ್ಯಂತ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆ ಮತ್ತು ಪೊಲೀಸರ ಬಲ ಪ್ರಯೋಗದಲ್ಲಿ 208 ಜನ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ ಎಂದು ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆ ತಿಳಿಸಿದೆ.

ಸರ್ಕಾರ ಸಬ್ಸಿಡಿ ದರದಲ್ಲಿ ನೀಡುತ್ತಿದ್ದ ಗ್ಯಾಸೊಲೈನ್ ದರವನ್ನು ಏಕಾಏಕಿ ಶೇ.50ರಷ್ಟು ಹೆಚ್ಚಿಸಿದ್ದನ್ನು ಖಂಡಿಸಿ ನ.15 ರಿಂದ ಆರಂಭವಾದ ಪ್ರತಿಭಟನೆಯಲ್ಲಿ ಕೇವಲ ಒಂದು ವಾರದಲ್ಲಿ 200ಕ್ಕೂ ಹೆಚ್ಚು ಮಂದಿ ಹತರಾದರು ಎಂದು ಸಂಸ್ಥೆ ತಿಳಿಸಿದೆ.

ರಾಜಧಾನಿ ತೆಹ್ರಾನ್ ಸೇರಿದಂತೆ ಇರಾಕ್‍ನ ವಿವಿಧೆಡೆ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಬಹುತೇಕ ಮಂದಿ ಮೃತಪಟ್ಟಿದ್ದಾರೆ.
ಭಾರೀ ಪ್ರತಿಭಟನೆಯಿಂದ ಇರಾನ್‍ನ ವಾಣಿಜ್ಯ-ವಹಿವಾಟಿಗೆ ಭಾರೀ ಹೊಡೆತ ಬಿದ್ದಿದ್ದು, ಲಕ್ಷಾಂತರ ಡಾಲರ್ ನಷ್ಟವಾಗಿದೆ.

Facebook Comments