21 ನೇ ಚಿನ್ನದ ಪದಕಕ್ಕೆ ಮುತ್ತಿಟ್ಟ ಬಂಗಾರದ ಮೀನು ಮೈಕೆಲ್

ಈ ಸುದ್ದಿಯನ್ನು ಶೇರ್ ಮಾಡಿ

21ST

ರಿಯೋ-ಡಿ-ಜನೈರೋ, ಆ.10– ಈಜು ಕ್ರೀಡೆಯಲ್ಲಿ ಬಂಗಾರದ ಮೀನು ಎಂದೇ ವಿಶ್ವ ಮನ್ನಣೆ ಗಳಿಸಿರುವ ಅಮೆರಿಕದ ಮೈಕೆಲ್ ಫೆಲ್ಫ್ಸ್ ತಮ್ಮ 21ನೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ರಿಯೋ ಒಲಂಪಿಕ್ಸ್‍ನಲ್ಲಿ ಕೇವಲ ಒಂದು ಗಂಟೆ ಅಂತರದಲ್ಲಿ ಎರಡು ಗೋಲ್ಡ್ ಮೆಡಲ್‍ಗಳನ್ನು ಗೆದ್ದ ಅಪ್ರತಿಮ ಸಾಧನೆ ಇವರದು.  ಮೊದಲು ನಡೆದ 200 ಮೀಟರ್ ಬಟರ್‍ಫ್ಲೈ ಈಜು ವಿಭಾಗದಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಚಾಡ್‍ಲೇ ಕ್ಲೊಸ್ ಅವರನ್ನು ಹಿಂದಿಕ್ಕಿ 20ನೆ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.  ಇದಾದ ಒಂದು ಗಂಟೆ ನಂತರ ನಡೆದ 4*200 ಫ್ರೀ ಸ್ಟೈಲ್ ರಿಲೆಯಲ್ಲಿ ತನ್ನ ತಂಡದೊಂದಿಗೆ ಸೆಣಸಿದ ಮೈಕೆಲ್ 21ನೆ ಬಂಗಾರ ಪದಕವನ್ನು ಗೆದ್ದು ಹೊಸ ವಿಶ್ವ ವಿಕ್ರಮ ಸಾಧಿಸಿದರು.

ಕಳೆದ ಎರಡು ದಿನಗಳ ಹಿಂದಷ್ಟೇ ಮೈಕೆಲ್ ಅವರನ್ನು ಒಳಗೊಂಡ ಅಮೆರಿಕ ತಂಡವು 4*100 ಮೀಟರ್ ರಿಲೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಇದರೊಂದಿಗೆ ಮೆಕೆಲ್ ಈವರೆಗೆ ಮೂರು ಗೋಲ್ಡ್ ಮೆಡೆಲ್‍ಗಳನ್ನು ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

 

Facebook Comments

Sri Raghav

Admin