ತಿಪಟೂರಿನಲ್ಲಿ ಪಟಾಕಿಗೆ ಯುವತಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Pataki--01

ತುಮಕೂರು, ಡಿ.3-ಇಲ್ಲಿ ನಡೆಯುವ ವೈಭವೋಪೇತ ಗಣೇಶ ಉತ್ಸವದ ನಂತರ ಕಳೆದ ರಾತ್ರಿ ವಿಸರ್ಜನೆ ವೇಳೆ ಸಿಡಿಸಿದ ಪಟಾಕಿ ದುರಂತದಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದಾರೆ. ಬೆಂಗಳೂರಿನ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ತಿಪಟೂರಿನ ಅಡವನಹಳ್ಳಿ ಜನತಾ ಕಾಲೋನಿಯ ನಿವಾಸಿ ಸಿತಾರಾ (22) ಮೃತ ದುರ್ದೈವಿಯಾಗಿದ್ದಾರೆ.

ಘಟನೆಯ ವಿವರ:
ತಿಪಟೂರಿನ ಗಣೇಶ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಗಣೇಶನನ್ನು ಮೂರು ತಿಂಗಳಿನಿಂದ ಪ್ರತಿಷ್ಠಾಪಿಸಿ, ಪೂಜಿಸಿದ ಕಾರ್ತೀಕ ಮಾಸದ ಕೊನೆಯಲ್ಲಿ ವಿಸರ್ಜನೆ ಕಾರ್ಯ ವಿಜೃಂಭಣೆಯಿಂದ ನಡೆಯುತ್ತದೆ.ಅದರಂತೆ ನಿನ್ನೆ ಕೂಡ ಸಾವಿರಾರು ಭಕ್ತರು ನಗರಕ್ಕೆ ಆಗಮಿಸಿದ್ದರು. ಮೆರವಣಿಗೆ ನಡೆಯುವ ವೇಳೆ ಸಿಡಿ ಮದ್ದಿನ ಪ್ರದರ್ಶನ ನಡೆಯುತ್ತಿತ್ತು. ಎಲ್ಲರೂ ಸಂಭ್ರಮದಿಂದ ಜಯಘೋಷಗಳನ್ನು ಕೂಗುತ್ತಿದ್ದ ವೇಳೆಯಲ್ಲಿ ಪಟಾಕಿಯಿಂದ ಸಿಡಿದ ಬೆಂಕಿ ಕಿಡಿಯೊಂದು ಗುಂಪಿನ ಮೇಲೆ ಬಿದ್ದಿದೆ.

ಸ್ನೇಹಿತೆಯ ಜತೆ ಉತ್ಸವ ವೀಕ್ಷಿಸಲು ಆಗಮಿಸಿದ್ದ ಸಿತಾರಾಳ ತಲೆಯ ಮೇಲೆ ಪಟಾಕಿ ಸಿಡಿದಿದ್ದರಿಂದ ಅಲ್ಲಿಯೇ ಕುಸಿದು ಬಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಜಿತೇಂದ್ರ ಸೇರಿದಂತೆ ಮತ್ತಿತರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ , ಡಿವೈಎಸ್ಪಿ ವೇಣುಗೋಪಾಲ್ , ಇನ್ಸ್‍ಪೆಕ್ಟರ್ ಕಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin