ವಿಶ್ವದಾದ್ಯಂತ ಕಿಲ್ಲರ್ ಕರೋನಾಗೆ 21,000 ಜನ ಬಲಿ, 4.71 ಲಕ್ಷ ಮಂದಿಯಲ್ಲಿ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಮಾ.26-ಜಗತ್ತಿನಾದ್ಯಂತ ಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಮತ್ತಷ್ಟುತೀವ್ರಗೊಂಡಿದ್ದು, ಈವರೆಗೆ185ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು 21,000 ಮಂದಿ ಬಲಿಯಾಗಿದ್ದಾರೆ. ಅಲ್ಲದೇ ಸೋಂಕು ಪೀಡಿತರ ಸಂಖ್ಯೆ 4.71 ಲಕ್ಷಕ್ಕೇರಿದೆ.

ಅಲ್ಲದೇ ಈ ಹೆಮ್ಮಾರಿಗೆಹೆದರಿ ವಿಶ್ವವ್ಯಾಪಿ 3 ಶತಕೋಟಿಗೂ ಹೆಚ್ಚು ಮಂದಿ ಲಾಕ್‍ಡೌನ್ ಸ್ಥಿತಿಯಲ್ಲಿದ್ದಾರೆ. ಇದು ವಿಶ್ವದಜನಸಂಖ್ಯೆಯ ಮೂರನೇಒಂದು ಭಾಗದಷ್ಟು (300 ಕೋಟಿ) ಮಂದಿ ಜನಜೀವನಅಯೋಮಯವಾಗಿದೆ.

ಕೊರೊನಾ ಬಾಧೆಯಿಂದ ತತ್ತರಿಸಿರುವ ಇಟಲಿಯಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಮತ್ತೆಸಾವಿನ ಪ್ರಕರಣಗಳು ವರದಿಯಾಗಿವೆ. ಇಟಲಿಯಲ್ಲಿ ಈಗಾಗಲೇ ಸತ್ತವರ ಸಂಖ್ಯೆ7,000 ದಾಟಿದೆ.ಅಲ್ಲದೇಸುಮಾರು51,000 ಮಂದಿಗೆ ಸೋಂಕು ತಗುಲಿದ್ದು, ಕಳವಳಕಾರಿಯಾಗಿದೆ. ಸೋಂಕಿತರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಅಮೆರಿಕ ಮತ್ತು ಸ್ಪೇನ್‍ನಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರಿದಿದೆ. ಅಮೆರಿಕದಲ್ಲಿಈವರೆಗೆ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು50 ಪ್ರಾಂತ್ಯಗಳಲ್ಲಿ ಸುಮಾರುಮತ್ತೆ ಸುಮಾರುಒಟ್ಟು50,000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಇರಾನ್, ಪಾಕಿಸ್ತಾನ, ಸ್ಪೇನ್ ಮತ್ತು ಫ್ರಾನ್ಸ್ ದೇಶಗಳಲ್ಲಿಯೂ ಈ ಹೆಮ್ಮಾರಿಯಅಟ್ಟಹಾಸಕ್ಕೆಮತ್ತೆ ಸಾವು ನೋವು ಮರುಕಳಿಸಿವೆ.

ಒಟ್ಟು 45 ದೇಶಗಳು ಲಾಕ್‍ಡೌನ್ ಪರಿಸ್ಥಿತಿಯಲ್ಲಿ ನರಳುತ್ತಿವೆ. ಕೋವಿಡ್-19 ಜಗತ್ತಿನ 185 ದೇಶಗಳಲ್ಲಿ ತನ್ನಕಬಂಧ ಬಾಹುಗಳನ್ನು ವ್ಯಾಪಿಸಿದ್ದು ಜಾಗತಿಕ ಪಿಡುಗಾಗಿ ಪರಿಣಮಿಸಿದೆ. ಒಟ್ಟಾರೆ ಈ ಮಹಾಮಾರಿ ವಿರುದ್ಧಇಡೀ ವಿಶ್ವವೇ ಹೋರಾಡುವಂತಾಗಿದೆ.

Facebook Comments

Sri Raghav

Admin