ಅಕ್ರಮವಾಗಿ ದನದ ಮಾಂಸ ಸಾಗಣೆ : ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಡಿ.5- ಅಕ್ರಮವಾಗಿ 21 ಸಾವಿರ ಕೆಜಿ ದನದ ಮಾಂಸ ಸಾಗಣೆ ಮಾಡುತ್ತಿದ್ದ ತಮಿಳುನಾಡಿನ ಇಬ್ಬರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಬ್ಬರನ್ನು ಕೆ.ರಾಜೇಂದ್ರ ಮತ್ತು ರಂಜಿತ್‍ಕುಮಾರ್ ಎಂದು ಗುರುತಿಸಲಾಗಿದೆ.

ಮಹಾರಾಷ್ಟ್ರದ ಥಾಣೆಯಿಂದ ತಮಿಳುನಾಡಿಗೆ ದನದ ಮಾಂಸವನ್ನು ಸಾಗಾಣಿಕೆ ಮಾಡಲಾಗುತ್ತಿತ್ತು. ಪಾಲ್ಗಾರ್ ಜಿಲ್ಲೆಯ ಖಾಸಾ ಪ್ರದೇಶದಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಮಾಂಸವನ್ನು ಯಾವ ಕಾರಣ ಕ್ಕಾಗಿ ಸಾಗಾಣಿಕೆ ಮಾಡುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೃಹತ್ ಪ್ರಮಾಣದ ಈ ಸಾಗಾಣಿಕೆಯ ಬಗ್ಗೆ ಹಲವು ಅನುಮಾನಗಳು ಕೇಳಿ ಬಂದಿವೆ. ಪ್ರಭಾವಿ ವ್ಯಕ್ತಿಗಳು ಇದರ ಹಿಂದೆ ಇರುವ ಶಂಕೆಗಳು ವ್ಯಕ್ತವಾಗಿವೆ.

Facebook Comments