22ನೇ ಚಿನ್ನದ ಪದಕ ಗೆದ್ದ ಮೈಕೆಲ್ ಫೆಲ್ಪ್ಸ್

ಈ ಸುದ್ದಿಯನ್ನು ಶೇರ್ ಮಾಡಿ

22-Gold

ರಿಯೊ ಡಿ ಜನೈರೊ. ಆ.12  :  ಗೋಲ್ಡ್ ಫಿಶ್ ಎಂದೇ ಖ್ಯಾತಿ ಪಡೆದಿರುವ ಅಮೆರಿಕಾದ ಈಜುಪಟು ಮೈಕೆಲ್ ಫೆಲ್ಪ್ಸ್ ಚಿನ್ನದ ಬೇಟೆ ಮುಂದುವರೆದಿದೆ. ರಿಯೊ ಒಲಂಪಿಕ್ಸ್ ನಲ್ಲ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಮೈಕೆಲ್ ಫೆಲ್ಪ್ಸ್ 200 ಮೀಟರ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಒಲಂಪಿಕ್ಸ್ ನಲ್ಲಿ 22 ಬಂಗಾರದ ಪದಕ ಗೆದ್ದ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.   ಅಥೆನ್ಸ್, ಬೀಜಿಂಗ್ ಹಾಗೂ ಲಂಡನ್ ಒಲಂಪಿಕ್ಸ್ ನಲ್ಲಿ ಚಿನ್ನದ ಬೇಟೆಯಾಡಿದ್ದ ಮೈಕಲ್ ರಿಯೊದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ.  4100 ಫ್ರೀ ಸ್ಟೈಲ್ ರಿಲೇಯಲ್ಲಿ ತಮ್ಮ ತಂಡದ ಗೆಲುವಿಗೆ ಕಾರಣರಾಗುವ ಮೂಲಕ 19ನೇ ಪದಕಕ್ಕೆ ಮುತ್ತಿಟ್ಟಿದ್ದರು.  ನಂತ್ರ 200 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿಯೂ ಚಿನ್ನದ ಪದಕವನ್ನು ಮೈಕೆಲ್ ತಮ್ಮದಾಗಿಸಿಕೊಂಡಿದ್ದರು. 4200 ಮೀಟರ್ ಫ್ರೀಸ್ಟೈಲ್ ಈಜಿನಲ್ಲಿ ಚಿನ್ನ ಗೆದ್ದಿದ್ದರು ಮೈಕಲ್. ಈವರೆಗೆ ಮೈಕಲ್ ರಿಯೊ ಒಲಂಪಿಕ್ಸ್ ನಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin