22 ಅತ್ಯಾವಶ್ಯಕ ಮಾತ್ರೆಗಳ ದರಗಳನ್ನು ಕಡಿಮೆ : ರೋಗಿಗಳಿಗೆ ವರದಾನ

ಈ ಸುದ್ದಿಯನ್ನು ಶೇರ್ ಮಾಡಿ

Medicine

ನವದೆಹಲಿ, ಆ.20-ನ್ಯಾಷನಲ್ ಫಾರ್ಮಾಸಿಟಿಕಲ್ ಪ್ರೈಸಿಂಗ್ ಅಥಾರಿಟಿ 22 ಅತ್ಯಾವಶ್ಯಕ ಮಾತ್ರೆಗಳ ದರಗಳನ್ನು ಕಡಿಮೆಗೊಳಿಸಿದ್ದು, ಎನ್ಪಿಪಿಎಯ ಈ ನಿರ್ಧಾರ ರೋಗಿಗಳಿಗೆ ದೊಡ್ಡ ವರದಾನವೇ ಆಗಿದೆ. ಎನ್ಪಿಪಿಎ, ಕ್ಯಾನ್ಸರ್, ಎಚ್ಐವಿ ಏಡ್ಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಹರಡುವ ಮಲೇರಿಯಾ ಮುಂತಾದ ಹಲವು ರೋಗಗಳಿಗೆ ಸಂಬಂಧಪಟ್ಟ ಮಾತ್ರೆಗಳ ದರವನ್ನು ಪ್ರತಿಶತ ಶೇ.45 ರಷ್ಟು ಇಳಿಕೆ ಮಾಡಿದೆ. ಇನ್ನೂ ಕೆಲವು ಮಾತ್ರೆಗಳ ದರವನ್ನು ಶೇ.10 ರಷ್ಟು ಇಳಿಸಿ, 13 ವಿಧದ ಮಾತ್ರೆಗಳ ರಿಟೇಲ್ ದರಗಳನ್ನು ಕೂಡ ನಿರ್ಧರಿಸಿದೆ.  ಉತ್ಪಾದಕರು ಎನ್ಪಿಪಿಎ ನಿರ್ಧರಿಸಿದ ದರವನ್ನೇ ಪಾಲಿಸಬೇಕು. ಒಮ್ಮೆ ಕಂಪನಿ ಸೀಲಿಂಗ್ ದರ ಮತ್ತು ನಿಯಮಗಳ ಪಾಲನೆ ಮಾಡದಿದ್ದಲ್ಲಿ ಕಂಪನಿ ಪಡೆದ ಹೆಚ್ಚುವರಿ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಲಾಗುವುದು ಎಂದು ಎನ್ಪಿಪಿಎ ಹೇಳಿದೆ.

ಕಂಪನಿಗಳು ವರ್ಷದಲ್ಲಿ ಒಮ್ಮೆ ಮಾತ್ರೆಗಳ ದರವನ್ನು ಶೇ.10 ರಷ್ಟು ಏರಿಸುವ ಹಕ್ಕನ್ನು ಹೊಂದಿವೆ. ಪ್ರಸಕ್ತ ವರ್ಷದಲ್ಲಿ ಎನ್ಪಿಪಿಎ 316 ಮಾತ್ರೆಗಳ ದರವನ್ನು ಕಡಿಮೆಮಾಡಿದೆ. 123 ಮಾತ್ರೆಗಳಿಗೆ ಹೆಚ್ಚುವರಿ ದರ ನಿಕ್ಕಿಗೊಳಿಸಿದೆ. ಈ ಹಿಂದೆ ಕೂಡ ಎನ್ಪಿಪಿಎ, 51 ಮಾತ್ರೆಗಳ ರಿಟೇಲ್ ದರವನ್ನು ನಿರ್ಧರಿಸಿತ್ತು. ಕಳೆದ ಜುಲೈನಲ್ಲಿ ಇಂತಹ ನಿಯಮಗಳನ್ನು ಮೀರಿದ 118 ಕಂಪನಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin