22 ಕೆರೆಗಳಿಗೆ ಹೇಮಾವತಿ ನೀರು : ಶಾಸಕ ಸಿ.ಬಿ.ಸುರೇಶ್‍ಬಾಬು

ಈ ಸುದ್ದಿಯನ್ನು ಶೇರ್ ಮಾಡಿ

Hemavathi

ಚಿಕ್ಕನಾಯಕನಹಳ್ಳಿ,ನ.23-ಮುಂದಿನ ವರ್ಷದಲ್ಲಿ ತಾಲ್ಲೂಕಿನ 22 ಕೆರೆಗಳಿಗೆ ಹೇಮಾವತಿ ಕುಡಿಯುವ ನೀರು ಹರಿಸುವುದು ಶತಸಿದ್ಧ ಎಂದು ಶಾಸಕ ಸಿ.ಬಿ.ಸುರೇಶ್‍ಬಾಬು ಹೇಳಿದರು.ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಗಸರಹಳ್ಳಿ ಭಾಗದ ಹೇಮಾವತಿ ನಾಲಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಹೇಮಾವತಿ ಶಾಖಾ ನಾಲಾ ವಲಯದ ಸಾಸಲು ಪೆಮ್ಮಲದೇವರಹಳ್ಳಿ ಕೆರೆಯವರೆಗೆ ನಾಲಾ ಕಾಮಗಾರಿ ನಡೆಯುತ್ತಿದೆ. ಕೆಲವೊಂದು ಭಾಗಗಳಲ್ಲಿ ಭೂಮಿ ನೀಡಿದ ರೈತರಿಗೆ ಇನ್ನೂ ಪರಿಹಾರದ ಹಣ 21 ಕೋಟಿ ರೂ ನೀಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಪರಿಹಾರದ ಹಣವನ್ನು ರೈತರಿಗೆ ಕೂಡಲೇ ಕೊಡಿಸುವಂತೆ ಸೂಚಿಸಿದ್ದಾರೆ ಎಂದರು.ಜಿ.ಪಂ.ಸದಸ್ಯ ಕಲ್ಲೇಶ್, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಗ್ರಾ.ಪಂ.ಉಪಾಧ್ಯಕ್ಷೆ ವಿವೇಕಾನಂದ, ರವಿಕುಮಾರ್, ರಾಜಶೇಖರ್, ರಮೇಶ್, ಸತೀಶ್, ಎಂ.ಎನ್.ಸುರೇಶ್, ಬಸವರಾಜು, ಶೆಟ್ಟಿಕೆರೆ ಗ್ರಾ.ಪಂ.ಅಧ್ಯಕ್ಷೆ ನಾಗಮಣಿ ಮುಂತಾದವರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin