23 ಶಾಸಕರಿಗೆ ಕೊರೋನಾ, ಪಂಜಾಬ್ ಅಧಿವೇಶನಕ್ಕೆ ಕೋವಿಡ್ ಅಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ಅಮೃತಸರ,ಆ.27-ಪಂಜಾಬ್ ಅವೇಶನಕ್ಕೂ ಮುನ್ನವೇ ಆ ರಾಜ್ಯದ 23 ಶಾಸಕರಿಗೆ ಮಾರಕ ಕೊರೋನಾ ವೈರಸ್ ಸೋಂಕು ಒಕ್ಕರಿಸಿದ್ದು, ಪಂಜಾಬ್ ಅವೇಶನದ ಮೇಲೆ ಕರಿನೆರಳು ಬೀರಿದೆ.

ವಿಧಾನಸಭೆ ಅಧಿವೇಶನಕ್ಕೆ ಇನ್ನು ಕೇವಲ 2 ದಿನಗಳಷ್ಟೇ ಬಾಕಿ ಇದೆ. ಇಲ್ಲಿಯವರೆಗೆ 23 ಶಾಸಕರಿಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಇದು ಶಾಸಕರು, ಮಂತ್ರಿಗಳ ಸ್ಥಿತಿಯಾಗಿದ್ದರೆ, ಈ ನೆಲದ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸಬಹುದು, ಪರೀಕ್ಷೆಯನ್ನು ನಡೆಸಲು ಈ ಸನ್ನಿವೇಶ ಸೂಕ್ತವಾಗಿಲ್ಲ, ಎಂಜಿನಿಯರಿಂಗ್, ಮತ್ತು ವೈದ್ಯಕೀಯ ಕೋಸ್ರ್ಗಳಿಗೆ ಅವಕಾಶ ನೀಡುವ ಕೇಂದ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ.

ಇದೇ ಕಾರಣಕ್ಕೆ ಇದೀಗ ರಾಜ್ಯದಲ್ಲಿರುವ ಎಲ್ಲ ಶಾಸಕರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ. ಪಂಜಾಬ್ ನಲ್ಲಿ ಒಟ್ಟು 117 ಶಾಸಕರಿದ್ದು, ಈ ಪೈಕಿ 23 ಮಂದಿ ಶಾಸಕರು ಸೋಂಕಿಗೆ ತುತ್ತಾಗಿದ್ದಾರೆ.

ಆಗಸ್ಟ್ 28ರಂದು ಪಂಜಾಬ್ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಪಂಜಾಬ್ ನಲ್ಲಿ ಶಾಸಕರು ಮಾತ್ರವಲ್ಲದೇ ಸಚಿವರೂ ಕೂಡ ಸೋಂಕಿಗೆ ತುತ್ತಾಗಿದ್ದು, ಗ್ರಾಮೀಣಾಭಿವದ್ಧಿ ಸಚಿವ ಟ್ರಿಪ್ಟ್ ರಾಜಿಂದರ್ ಬಜ್ವಾ ಅವರು ಸೋಂಕಿಗೆ ತುತ್ತಾದ ಮೊದಲ ಸಚಿವರಾಗಿದ್ದಾರೆ.

ಬಳಿಕ ಸಹಕಾರ ಸಚಿವ ಸುಖ್ಜಿಂದರ್ ಸಿಂಗ್ ರಾಂಧವ, ಕಂದಾಯ ಸಚಿವ ಗುರುಪ್ರೀತ್ ಕಂಗಾರ್ ಮತ್ತು ಕೈಗಾರಿಕಾ ಸಚಿವ ಶಾಮ್ ಸುಂದರ್ ಅರೋರಾ ಅವರು ಸೋಂಕಿಗೆ ತುತ್ತಾಗಿದ್ದಾರೆ.

Facebook Comments

Sri Raghav

Admin