ಈಶಾನ್ಯದಲ್ಲಿ ಪ್ರವಾಹಕ್ಕೆ 26 ಸಾವು, ನೆಲೆ ಕಳೆದುಕೊಂಡ 4.5 ಲಕ್ಷ ಮಂದಿ

ಈ ಸುದ್ದಿಯನ್ನು ಶೇರ್ ಮಾಡಿ

north-East-01

ಗುವಾಹತಿ/ಅಗರ್ತಲ/ಇಂಫಾಲ, ಜೂ.18- ಈಶಾನ್ಯ ಪ್ರಾಂತ್ಯದ ರಾಜ್ಯಗಳು ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸುತ್ತಿವೆ. ಈವರೆಗೆ 26 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಕೆಲವರು ಕಣ್ಮರೆಯಾಗಿದ್ದು, ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ. ಅಸ್ಸಾಂ, ತ್ರಿಪುರ ಮತ್ತು ಮಣಿಪುರ ರಾಜ್ಯಗಳಲ್ಲಿ ಕಳೆದ ಒಂದು ವಾರದಿಂದ ಕುಂಭದ್ರೋಣ ಮಳೆ ರುದ್ರನರ್ತನ ಮಾಡಿದೆ. ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಈವರೆಗೆ 26 ಮಂದಿ ಅಸುನೀಗಿದ್ಧಾರೆ. ಈ ಮೂರು ಪ್ರಾಂತ್ಯಗಳ ಆರು ಜಿಲ್ಲೆಗಳಲ್ಲಿ ಒಟ್ಟು 4.5 ಲಕ್ಷ ಜನರು ಸಂತ್ರಸ್ತರಾಗಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ನಿಲುಗಡೆಯಾಗಿದೆ.

north-East-05

ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಕರ್ತರು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳಲ್ಲಿ 30,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹ ಪೀಡಿತ ರಾಜ್ಯಗಳ ಸಂತ್ರಸ್ತ ಪ್ರದೇಶಗಳಲ್ಲಿ ನಿನ್ನೆ ಭಾರತೀಯ ವಾಯು ಪಡೆ 8 ಟನ್ನುಗಳಷ್ಟು ಪರಿಹಾರ ಸಾಮಗ್ರಿಗಳನ್ನು ಪೂರೈಸಿದೆ. ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿದ್ದು, ಪ್ರತಿ ಗಂಟೆಗೆ ನೀರಿನ ಮಟ್ಟ 4 ರಿಂದ 5 ಸೆಂ.ಮೀ. ಹೆಚ್ಚಾಗುತ್ತಿದ್ದು, ನಾಳೆ ವೇಳೆಗೆ ಅಪಾಯ ಮಟ್ಟ ತಲುಪುವ ಬಗ್ಗೆ ಕೇಂದ್ರ ಜಲ ಆಯೋಗ ಎಚ್ಚರಿಕೆ ನೀಡಿದೆ.

north-East-04

north-East-03

north-East-02

Facebook Comments

Sri Raghav

Admin