ಬಿರುಗಾಳಿ, ಸಿಡಿಲಿನ ಆರ್ಭಟಕ್ಕೆ 23 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹತಿ, ಮೇ 15-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಬಿರುಗಾಳಿ ಮತ್ತು ಗುಡುಗು-ಮಿಂಚು ಆರ್ಭಟದಿಂದ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ.  ರಾಜ್ಯದ 18 ಜಿಲ್ಲೆಗಳಲ್ಲಿ ಈ ಎರಡು ನೈಸರ್ಗಿಕ ವಿಕೋಪಗಳಿಂದ 22,801 ಕುಟುಂಬಗಳು ಸಂತ್ರಸ್ತಗೊಂಡಿವೆ ಎಂದು ಅಸ್ಸಾಂ ರಾಜ್ಯ ಪತ್ತು ನಿರ್ವಹಣಾ ಪ್ರಾಧಿಕಾರ(ಎಎಸ್‍ಡಿಎಂಎ) ತಿಳಿಸಿದೆ.

ಗೋಲಾಘಾಟ್, ಶಿವಸಾಗರ್, ಧುಬ್ರಿ, ಸೊಂಟಿಪುರ್ ಮತ್ತು ಕಾಚಾರ್ ತೀವ್ರ ಹಾನಿಗೆ ಒಳಗಾದ ಜಿಲ್ಲೆಗಳಾಗಿವೆ  ಭಾರೀ ಬಿರುಗಾಳಿಗೆ 10 ಮಂದಿ ಮೃತಪಟ್ಟಿದ್ದು, ಮಿಂಚು-ಸಿಡಿಲಿನಿಂದ 13 ಮಂದಿ ಸಾಗೀಡಾಗಿದ್ದಾರೆ ಎಂದು ಪ್ರಾಧಿಕಾರ ಅಂಕಿಅಂಶ ನೀಡಿದೆ.

ಬಿರುಗಾಳಿಯಿಂದ ಅನೇಕ ಮನೆಗಳು, ಮರಗಳು ಮತ್ತು ವಿದ್ಯುತ್ ಕಂಬಗಳಿಗೆ ವ್ಯಾಪಕ ಹಾನಿಯಾಗಿದೆ. ಮೃತ ಕುಟುಂಬಗಳ ಹತ್ತಿರ ಸಂಬಂಧಿಗಳಿಗೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂ.ಗಳ ಪರಿಹಾರ ಧನ ಘೋಷಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ