ರಾಜ್ಯದಲ್ಲಿ ಇಂದು 23 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 1079ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 16- ರಾಜ್ಯದಲ್ಲಿ ಕೊರೊನಾ ಸೋಂಕು ಏರುಮುಖವಾಗುತ್ತಲೇ ಇದೆ. ಹೊಸದಾಗಿ 23 ಕೋವಿಡ್-19 ಪ್ರಕರಣಗಳು ಪತ್ತೆಯಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ.

ನಿನ್ನೆ ಸಂಜೆ 5 ರಿಂದ ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾದ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ರಾಜಧಾನಿ ಬೆಂಗಳೂರು ಒಂದರಲ್ಲೇ 14, ಮಂಡ್ಯ 1, ಹಾಸನ 3, ಉಡುಪಿ 1, ಧಾರವಾಡ 1, ದಾವಣಗೆರೆ 1, ಬಳ್ಳಾರಿ 1, ಬಾಗಲಕೋಟೆ 1 ಸೇರಿದಂತೆ 23 ಸೋಂಕಿತರು ಪತ್ತೆಯಾಗಿದ್ದಾರೆ.

1079 ಕೊರೊನಾ ಸೋಂಕಿತರಲ್ಲಿ 494 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. 548 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ಸೋಂಕಿನಿಂದ 36 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು ಬಿಡುಗಡೆಗೊಂಡ ಮಾಹಿತಿ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ ರೋಗಿ ಸಂಖ್ಯೆ 653ರ ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ 14 ಮಂದಿ ಪುರುಷರಿಗೆ ಸೋಂಕು ತಗುಲಿದೆ. 50 ವರ್ಷದ ವ್ಯಕ್ತಿ 17, 18, 19 ವರ್ಷದ ಯುವಕರನ್ನು ಹೊರತುಪಡಿಸಿದರೆ ಎಲ್ಲರೂ 25, 27, 24 ವರ್ಷದ ವಯೋಮಾನದವರು ದ್ವಿತೀಯ ಸಂಪರ್ಕದಿಂದ ರೋಗ ಅಂಟಿಸಿಕೊಂಡಿದ್ದಾರೆ. ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಡ್ಯದಲ್ಲಿ 40 ವರ್ಷದ ವ್ಯಕ್ತಿಗೆ ಕೋಲಾರ ಜಿಲ್ಲೆಗೆ ಪ್ರಯಾಣ ಮಾಡಿದ್ದರಿಂದ ಈ ಸೋಂಕು ತಗುಲಿದ್ದು, ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.ಹಾಸನದಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿದ್ದು, ಮೂವರೂ ಮುಂಬೈನಿಂದ ಹಿಂದಿರುಗಿದವರಾಗಿದ್ದಾರೆ. 63, 50 ವರ್ಷದ ಪುರುಷರು, 21 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಇವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿಯಲ್ಲಿ ಒಂದು ವರ್ಷದ ಹೆಣ್ಣು ಮಗುವಿಗೆ ಇಂದು ರೋಗ ಲಕ್ಷಣ ಕಂಡುಬಂದಿದೆ. ದುಬೈನಿಂದ ವಾಪಸಾಗಿರುವ ಮಗುವಿಗೆ ರೋಗ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಧಾರವಾಡದಲ್ಲೂ ಕೂಡ ಮುಂಬೈನಿಂದ ಹಿಂದಿರುಗಿರುವ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆಯಲ್ಲಿ 65 ವರ್ಷದ ವೃದ್ಧೆಗೆ ರೋಗಿ ನಂ.533ರ ದ್ವಿತೀಯ ಸಂಪರ್ಕದಿಂದ ರೋಗ ತಗುಲಿದೆ. ಗುಜರಾತ್‍ನ ಅಹಮದಾಬಾದ್‍ನಿಂದ ಹಿಂದಿರುಗಿದ ಬಳ್ಳಾರಿಯ 46 ವರ್ಷದ ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಬೈನಿಂದ ಹಿಂದಿರುಗಿದ ಬಾಗಲಕೋಟೆಯ 33 ವರ್ಷದ ವ್ಯಕ್ತಿಗೂ ಕೂಡ ಸೋಂಕು ತಗುಲಿದೆ. ಇವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಬರುತ್ತಿರುವವರಲ್ಲಿ ಸೋಂಕು ಕಂಡುಬರುತ್ತಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಂಜೆ 5 ಗಂಟೆಗೆ ಮತ್ತೆ ಹೆಲ್ತ್ ಬುಲೆಟಿನ್ ಪ್ರಕಟವಾಗಲಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Facebook Comments

Sri Raghav

Admin