24 ಜನ ಮೃತಪಟ್ಟಿದ್ದ ಸಮ್ ಆಸ್ಪತ್ರೆ ಬೆಂಕಿ ದುರಂತ : ಟ್ರಸ್ಟಿ ಮನೋಜ್ ನಾಯಕ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

SUM

ಭುವನೇಶ್ವರ, ಅ.20- ಬೆಂಕಿ ದುರಂತದಲ್ಲಿ 24 ಜನರನ್ನು ಆಪೋಶನ ತೆಗೆದುಕೊಂಡ ಸಮ್ ಆಸ್ಪತ್ರೆಯ ಮಾಲೀಕ ಮನೋಜ್ ರಂಜನ್ ನಾಯಕ್ ಪೊಲೀಸರಿಗೆ ಶರಣಾದ ನಂತರ ಬಂಧನಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಯನ್ನು ನಡೆಸುತ್ತಿದ್ದ ಶಿಕ್ಷ್ಯಾ ಓ ಅನುಸಂಧಾನ್ ಚಾರಿಟೇಬಲ್ ಟ್ರಸ್ಟ್ಗೆ ಇವರು ಅಧ್ಯಕ್ಷರಾಗಿದ್ದಾರೆ.  ಮನೋಜ್ ರಂಜನ್ ನಾಯಕ್ ಶರಣಾಗತಿಯೊಂದಿಗೆ ಈ ದುರಂತಕ್ಕೆ ಸಂಬಂಧಿಸಿದಂತೆ ಈವರೆಗೆ ಐವರನ್ನು ಬಂಧಿಸಲಾಗಿದೆ.  ಕಂದಗಿರಿ ಪೊಲೀಸ್ ಠಾಣೆಗೆ ಮನೋಜ್ ನಾಯಕ್ ಶರಣಾಗಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ವೈ.ಬಿ.ಖುರಾನಿಯಾ ಸುದ್ಧಿಗಾರರಿಗೆ ತಿಳಿಸಿದ್ದಾರೆ. ಪೊಲೀಸ್ ಠಾಣೆಗೆ ಮುಂಜಾನೆ 3.30ರಲ್ಲಿ ಶರಣಾದ ಅವರನ್ನು ಗೋಪ್ಯ ಸ್ಥಳಕ್ಕೆ ಕರೆದೊಯ್ದು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Hospital-01

568ರಲ್ಲಿ 3 ಆಸ್ಪತ್ರೆಗಳು ಮಾತ್ರ ಸುರಕ್ಷಿತ :

ಅಗ್ನಿ ದುರಂತದ ನಂತರ ಓಡಿಶಾ ರಾಜ್ಯದ ಆಸ್ಪತ್ರೆಗಳ ಬೆಂಕಿ ಪ್ರತಿರೋಧಕ ಸುರಕ್ಷತೆ ಬಗ್ಗೆ ರಾಜ್ಯದ ಅಗ್ನಿಶಾಮಕ ದಳ ನಡೆಸಿದ ಪರಿಶೀಲನೆಯಲ್ಲಿ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ರಾಜ್ಯದಲ್ಲಿರುವ ಒಟ್ಟು 568 ಆಸ್ಪತ್ರೆಗಳಲ್ಲಿ 3 ಹಾಸ್ಪಿಟಲ್ಗಳು ಮಾತ್ರ ಸುರಕ್ಷಿತ ಅಗ್ನಿಶಾಮಕ ಸಾಧನೆಗಳನ್ನು ಹೊಂದಿವೆ ಎಂಬ ಅಂಶ ಮನವರಿಕೆಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin