24 ವರ್ಷದ ಬಳಿಕ ಅಯೋಧ್ಯೆಗೆ ಗಾಂಧಿ ಕುಟುಂಬ : ನಾಳೆ ರಾಹುಲ್ ಗಾಂಧಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Rahulk-Gandhi

ಲಖನೌ, ಸೆ.9-ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಪಣತೊಟ್ಟಿರುವ ರಾಹುಲ್‍ಗಾಂಧಿಯ ಕಿಸಾನ್ ಯಾತ್ರೆ ನಾಳೆ ಅಯೋಧ್ಯೆಗೆ ಭೇಟಿ ನೀಡಲಿದೆ. ಈ ಮೂಲಕ 24 ವರ್ಷದ ಬಳಿಕ ಗಾಂಧಿ ಕುಟುಂಬದ ವ್ಯಕ್ತಿಯೊಬ್ಬ ಅಯೋಧ್ಯೆಗೆ ಭೇಟಿ ನೀಡಿದಂತಾಗುತ್ತದೆ.  ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಸಾನ್ ಯಾತ್ರೆ ನಡೆಸುತ್ತಿದ್ದಾರೆ. 1992ರ ಡಿಸೆಂಬರ್‍ನಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಗಾಂಧಿ ಕುಟುಂಬದ ಯಾವೊಬ್ಬ ಸದಸ್ಯನೂ ಅಯೋಧ್ಯೆಗೆ ಕಾಲಿಟ್ಟಿರಲಿಲ್ಲ.
ಇನ್ನು ರಾಹುಲ್ ತಂದೆ ಮಾಜಿ ಪ್ರಧಾನಿ ರಾಜೀವ್‍ಗಾಂಧಿ 1991ರಲ್ಲಿ ಅಯೋಧ್ಯೆಯಲ್ಲಿನ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಬೇಕಾಗಿತ್ತು.ಆದರೆ ಸಮಯದ ಅಭಾವದಿಂದ ಭೇಟಿ ನೀಡಿರಲಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin