ಈ ವರ್ಷದ ಜೂನ್ ಅಂತ್ಯದವರೆಗೆ ಪಾಕ್‍ನಿಂದ 2,432 ಬಾರಿ ಕದನ ವಿರಾಮ ಉಲ್ಲಂಘನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.3- ಇಂಡೋ ಪಾಕ್ ಗಡಿ ಭಾಗದಲ್ಲಿ ನಿರಂತರವಾಗಿ ಉಪಟಳ ನೀಡುತ್ತಿರುವ ಪಾಕಿಸ್ತಾನ ಈ ವರ್ಷದ ಜೂನ್ ಅಂತ್ಯದವರೆಗೆ ಒಟ್ಟು 2,432 ಬಾರಿ ಅಪ್ರಚೋದಿತ ಕದನ ವಿರಾಮ ಉಲ್ಲಂಘಿಸಿದೆ.

ಆರು ತಿಂಗಳ ಅವಧಿಯಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಮತ್ತು ಅಪ್ರೇರಿತ ದಾಳಿಯಲ್ಲಿ 14 ಭಾರತೀಯರು ಮೃತಪಟ್ಟು 188 ಮಂದಿ ಗಾಯಗೊಂಡಿದ್ದಾರೆ.

ಈ ವಿಷಯವನ್ನು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮೀಷನ್ ಕಚೇರಿಯ ಉನ್ನತಾಧಿಕಾರಿಗಳಿಗೆ ಭಾರತವು ತಿಳಿಸಿ ಇಸ್ಲಾಮಾಬಾದ್ ದುವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.  ಗಡಿ ಭಾಗದಲ್ಲಿರುವ ನಿಯಂತ್ರಣ ರೇಖೆ(ಎಲ್‍ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿ(ಐಬಿ) ಬಳಿ ನಿಮ್ಮ ಸೇನಾ ಪಡೆಗಳು ಅಪ್ರಚೋದಿತ ಕದನ ವಿರಾಮವನ್ನು ನಿರಂತರವಾಗಿ ಉಲ್ಲೇಖಿಸುತ್ತಿದೆ.ಇದನ್ನು ಭಾರತ ಕಟುವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ಇಲಾಖೆ ಇಸ್ಲಾಮಾಬಾದ್‍ಗೆ ಸ್ಪಷ್ಟಪಡಿಸಿದೆ.

ಗಡಿ ಭಾಗದಲ್ಲಿ ಕದನ ವಿರಾಮದ ಜೊತೆಗೆ ಪಾಕಿಸ್ತಾನ ಸೇನಾ ಪಡೆಗಳು ಒಳನುಸುಳುವಿಕೆಗೆ ಕುಮ್ಮಕ್ಕು ನೀಡುತ್ತಿವೆ ಎಂಬ ವಿಷಯವನ್ನು ಪ್ರಸ್ತಾಪಿಸಿ ಇಸ್ಲಾಮಾಬಾದ್‍ನನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.

Facebook Comments