25ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಈ ಸುದ್ದಿಯನ್ನು ಶೇರ್ ಮಾಡಿ

doctor

ಹಿರೀಸಾವೆ, ಡಿ.22- ಬಾಳಗಂಚಿ ಗ್ರಾಮದ ದಿ.ಮೆಳ್ಳಹಳ್ಳಿ ಸಿದ್ದೇಗೌಡ ಮತ್ತು ದಿ.ಬಿ.ಎಸ್. ತಮ್ಮಣ್ಣಗೌಡರ ಸ್ಮರಣಾರ್ಥ 10 ನೇ ವರ್ಷದ ಉಚಿತ ವಾರ್ಷಿಕ ಆರೋಗ್ಯ ತಪಾಸಣಾ ಶಿಬಿರ ಇದೇ 25 ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿದೆ.  ಹೊನ್ನಮಾರನಹಳ್ಳಿ ಮತ್ತು ಅಂತನಹಳ್ಳಿ ಗ್ರಾಮಗಳಲ್ಲಿ ಶಿಬಿರ ಏರ್ಪಡಿಸಲಾಗಿದ್ದು , ಬಾಗಲಕೋಟೆ ಜಿಲ್ಲೆಯ ಕೃಷ್ಣ ಮೇಲ್ದಂಡೆ ಯೋಜನೆಯ ವಿಷೇಶ ಜಿಲ್ಲಾಧಿಕಾರಿ ಕರೀಗೌಡರು, ಬೆಂಗಳೂರು ಪೌರಾಡಳಿತ ವಿರ್ದೆಶನಾಲಯದ ಪೌರ ಸುಧಾರಣಾ ಕೋಶದ ಜಂಟಿ ನಿರ್ದೇಶಕ ವರಪ್ರಸಾದ ರೆಡ್ಡಿ, ಹಾಸನ ಜಿಲ್ಲೆ ಉಪವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜು ಮತ್ತು ಚನ್ನರಾಯಪಟ್ಟಣ ತಾಲ್ಲೂಕು ತಹಸಿಲ್ದಾರ್ ಡಿ. ವಿದ್ಯಾವತಿಯವರು ವಿಶೇಷ ಅತಿಥಿಗಳಾಗಿ ಆಗಮಿಸುವರು.

ಈ ಶಿಬಿರದ ಆಯೋಜಕರಾದ ಬೆಂಗಳೂರು ಕೆಂಪೇಗೌಡ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಬಿ.ಎಸ್. ಜಯರಾಮ್ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.ಈ ಶಿಬಿರದಲ್ಲಿ ಸಕ್ಕರೆ ಖಾಯಿಲೆ ಪರೀಕ್ಷೆ, ಹೃದ್ರೋಗ , ಕಣ್ಣು ತಪಾಸಣೆ, ಕೀಲು ಮತ್ತು ಮೂಳೆ ತಪಾಸಣೆ, ದಂತ ತಪಾಸಣೆ, ಮೂಳೆ ಸಾಂದ್ರತೆ ಪರೀಕ್ಷೆ, ಕಿವಿ, ಮೂಗು ಮತ್ತು ಗಂಟಲು ಪರೀಕ್ಷೆ, ಶಾಲಾ ಮಕ್ಕಳ ಆರೋಗ್ಯ ತಪಾಸಣೆ, ಅಂಗವಿಕಲತೆ ತಪಾಸಣೆ, ಇ.ಸಿ.ಜಿ. ಪರೀಕ್ಷೆ, ಶಸ್ತ್ರ ಚಿಕಿತ್ಸಾ ತಜ್ಞರಿಂದ ಉಚಿತ ಪರೀಕ್ಷೆ ನಡೆಸಲಾಗುವುದು ಮತ್ತು ಪರೀಕ್ಷೆಗೊಳಪಟ್ಟ ಎಲ್ಲರಿಗೂ ಉಚಿತ ಔಷಧಿ ನೀಡಲಾಗುವುದು ಎಂದು ಹೇಳಿದರು.ಈ ಶಿಬಿರದಲ್ಲಿ ಬೆಂಗಳೂರಿನ ಹೆಸರಾಂತ ಕೆಂಪೇಗೌಡ ಆಸ್ಪತ್ರೆ ವೈದ್ಯರು ಹಾಗೂ ನುರಿತ ಸಿಬ್ಬಂದಿ, ಯೂನಿಟಿ ಲೈಫ್‍ಟೈಮ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ, ಮಾರುತಿ ದಂತ ವೈದ್ಯಕೀಯ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮತ್ತಿತರ ವೈದ್ಯರು ಆಗಮಿಸಿ ಕಾರ್ಯ ನಿರ್ವಹಿಸುವರು.

ಹೆಚ್ಚಿನ ವಿವರಗಳಿಗೆ ಮೊ ನಂ. ಡಾ.ಜಯರಾಮ್ : 9900031855 ಮತ್ತು ಮಹಲಿಂಗೇಗೌಡ : 9480066231, ಮತ್ತು ಶಂಕರೇಗೌಡ : 9880528491 ಇವರನ್ನು ಸಂಪರ್ಕಿಸಿ ಎಂದು ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin