25 ಕರುಗಳ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

cow

ತುಮಕೂರು,ಆ.31-ನಗರದ ಹೊರವಲಯದಲ್ಲಿರುವ ಗ್ಯಾಸ್‍ಸ್ಟೋನ್ ಬಳಿ ಕೇರಳದ ಕಸಾಯಿ ಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆಗಟ್ಟಿ 25 ಕರುಗಳನ್ನು ರಕ್ಷಿಸಲಾಗಿದೆ.  ಪೊಲೀಸರು ಅನುಮಾನಗೊಂಡು ಲಾರಿಯನ್ನು ತಡೆದು ತಪಾಸಣೆ ಗೊಳಪಡಿಸಿದಾಗ 25ಕ್ಕೂ ಹೆಚ್ಚು ಸೀಮೆ ಹಸುಕರುಗಳನ್ನು ಸಾಗಿಸುತ್ತಿರುವುದು ಗೊತ್ತಾಗಿದೆ. ಇನ್‍ಸ್ಪೆಕ್ಟರ್ ನಾಗಲಿಂಗಯ್ಯ ಸ್ಥಳಕ್ಕೆ ಬಂದು ಪರಿಶೀಲಿಸಿ, ಅಯ್ಯಪ್ಪ ಅಜ್ಮಲ್, ಮಾದನಾಯಕ, ದೊಡ್ಡಮಾರಯ್ಯ ಹಾಗೂ ಚಾಲಕನನ್ನು ಬಂಧಿಸಿ ತನಿಖೆಗೊಳಪಡಿಸಲಾಗಿದೆ.
ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin