25 ಕೋಟಿ ಮೌಲ್ಯದ 80 ಕೆ.ಜಿ. ಚಿನ್ನ ನಿಗೂಢ ಕಣ್ಮರೆ…!

ಈ ಸುದ್ದಿಯನ್ನು ಶೇರ್ ಮಾಡಿ

Gold-Miss

ನವದೆಹಲಿ, ಆ.28- ರಾಜಧಾನಿಯ ಇಂದಿರಾಗಾಂಧಿ ಅಂತಾರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡ 25 ಕೋಟಿ ರೂ. ಮೌಲ್ಯದ 80 ಕೆ.ಜಿ. ಚಿನ್ನ ನಿಗೂಢವಾಗಿ ಕಣ್ಮರೆಯಾಗಿದೆ. ಈ ಘಟನೆ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡಲು ಹಣಕಾಸು ಸಚಿವಾಲಯ ನಿರ್ಧರಿಸಿದೆ.  ದೆಹಲಿಯ ಐಜಿಐ ವಿಮಾನನಿಲ್ಡಾಣದ ಸೀಮಾಸುಂಕ ಗೋದಾಮಿನಿಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ಮಗ್ಲರ್ಗಳಿಂದ ಜಪ್ತಿ ಮಾಡಲಾದ  ಚಿನ್ನದ ಬಿಸ್ಕತ್ತುಗಳು, ಬಾರ್ಗಳು ಮತ್ತು ಆಭರಣಗಳು ನಾಪತ್ತೆಯಾಗಿವೆ. ಈ ಎಲ್ಲ ಪ್ರಕರಣಗಳಲ್ಲಿ ಕಣ್ಮರೆಯಾಗಿರುವ ಬಂಗಾರಗಳ ಬದಲು ಅಷ್ಟೇನು ಬೆಲೆ ಬಾಳದ ಹಳದಿ ಲೋಹವನ್ನು (ನಕಲಿ) ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅತಿ ಭದ್ರತೆಯ ಗೋದಾಮಿನಲ್ಲಿ ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನ ಬಂದದ್ದಾದರೂ ಹೇಗೆ ಎಂಬ ಬಗ್ಗೆ ಉನ್ನತಾಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ನಿಗೂಢವಾಗಿ ಕಣ್ಮರೆಯಾಗಿರುವ 80 ಕೆಜಿ ಬಂಗಾರದ ಮಲ್ಯ ಈಗಿನ ಚಿನಿವಾರ ಪೇಟೆಯಲ್ಲಿ 25 ಕೋಟಿ ರೂ.ಗಳಿಗೂ ಹೆಚ್ಚು ಮಲ್ಯವಿದೆ. ಈ ಮೊದಲು ದೆಹಲಿ ಪೊಲೀಸರು ಚಿನ್ನ ನಾಪತ್ತೆ ಪ್ರಕರಣಗಳನ್ನು ವರದಿ ಮಾಡಿದ್ದರು. ಆದರೆ ಇದು ಮುಂದುವರಿದಿರುವುದರಿಂದ ಹಣಕಾಸು ಸಚಿವ ಅರುಣ್ ಜೇಟ್ಲಿ ಅನುಮೋದನೆ ಮೇರೆಗೆ ಸಿಬಿಐ ತನಿಖೆ ನಡೆಸಲು ಹಣಕಾಸು ಸಚಿವಾಲಯವು ನಿರ್ಧರಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin