27 ಮಂದಿ ಬಲಿಯಾದ ಕಾಬೂಲ್‍ ಗುರುದ್ವಾರ ದಾಳಿಗೆ ಎಲ್‍ಇಟಿ, ಐಎಸ್‍ಐ ಕಾರಣ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಕಾಬೂಲ್, ಮಾ.26-ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‍ನಗುರುದ್ವಾರದಲ್ಲಿ ನಿನ್ನೆ ನಡೆದ ಮಾನವ ಬಾಂಬ್ ದಾಳಿಯಲ್ಲಿ ಸಿಖ್ ಭಕ್ತರೂ ಸೇರಿದಂತೆ 27 ಮಂದಿ ಬಲಿಯಾದ ವಿಧ್ವಂಸಕಕೃತ್ಯಕ್ಕೆ ಐಎಸ್‍ಐಎಸ್‍ಉಗ್ರಗಾಮಿ ಸಂಘಟನೆ ಹೊಣೆ ಹೊತ್ತುಕೊಂಡಿದೆಯಾದರೂ, ಭಾರತೀಯ ಭದ್ರತಾ ಸಂಸ್ಥೆಗಳು ಈ ದುಷ್ಕøತ್ಯಕ್ಕೆ ಪಾಕಿಸ್ತಾನಿ ಮೂಲದ ಲಷ್ಕರ್-ಎ-ತೈಬಾ ಭಯೋತ್ಪಾದಕರೇ ಕಾರಣ ಎಂದು ಹೇಳುತ್ತಿದೆ.

ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐಜೊತೆ ಶಾಮೀಲಾಗಿ ಎಲ್‍ಇಟಿಯ ಹಖ್ಖಾನಿ ಗುಂಪಿನ ಭಯೋತ್ಪಾದಕರೇ ಈ ಭೀಕರ ದಾಳಿಗೆ ಕಾರಣಎಂದು ಭಾರತೀಯಗುಪ್ತಚರ ಸಂಸ್ಥೆಗಳು ತಿಳಿಸಿವೆ. ಕಾಬೂಲ್ ನಗರದ ಹೃದಯ ಭಾಗದಲ್ಲಿರುವಗುರುದ್ವಾರದಲ್ಲಿ ನಿನ್ನೆ ಸಿಖ್ಖರ್ ಮತ್ತುಇತರಧರ್ಮಿಯರು ಪ್ರಾರ್ಥನೆಯಲ್ಲಿತೊಡಗಿದ್ದಾಗ ಮಾನವ ಬಾಂಬರ್ ಮಂದಿರ ಪ್ರವೇಶಿಸಿ ತನ್ನನ್ನುತಾನು ಆಸ್ಫೋಟಿಸಿಕೊಂಡ.

ಈ ವಿಧ್ವಂಸಕಕೃತ್ಯದಲ್ಲಿ 27 ಮಂದಿ ಹತರಾಗಿ, ಎಂಟುಜನರುತೀವ್ರವಾಗಿಗಾಯಗೊಂಡರು. ಈ ಕೃತ್ಯವನ್ನು ಭಾರತ, ಅಮೆರಿಕ ಸೇರಿದಂತೆ ಅನೇಕ ದೇಶಗಳು ಅತ್ಯುಗ್ರವಾಗಿ ಖಂಡಿಸಿವೆ. ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರವೀಶ್‍ಕುಮಾರ್, ಇದು ಹೇಡಿತನದಕೃತ್ಯವಾಗಿದೆ.

ಕೊರೊನಾ ಪಿಡುಗುಇಡೀ ವಿಶ್ವವನ್ನೇಕಾಡುತ್ತಿರುವ ಸಂದರ್ಭದಲ್ಲಿಅಲ್ಪಸಂಖ್ಯಾತ ಸಮುದಾಯದ ಮುಗ್ಧ ಜನರನ್ನು ಬಲಿತೆಗೆದುಕೊಂಡಿರುವುದುದುಷ್ಟರಅತ್ಯಂತ ಹೀನ ಮನಸ್ಸಿನ ಸ್ಥಿತಿಗೆ ಸಾಕ್ಷಿಯಾಗಿದೆಎಂದುತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ಧಾರೆ.

ಅಮೆರಿಕ ಸಹ ಈ ಘಟನೆಯನ್ನು ಖಂಡಿಸಿದೆ. ವಿದೇಶಾಂಗ ಸಚಿವ ಮೈಕ್ ಪೊಂಪಿಯೋ ಹೇಳಿಕೆ ನೀಡಿ, ಉಗ್ರಗಾಮಿಗಳ ದುಷ್ಟಕೃತ್ಯವನ್ನು ನಾವು ಖಂಡಿಸುತ್ತೇವೆ. ಐಸಿಸ್ ಮತ್ತುಇತರ ಉಗ್ರಗಾಮಿಗಳ ಕೃತ್ಯವನ್ನು ಮಟ್ಟಹಾಕವೇಕೆಂಬುದು ವಿಶ್ವದಜನರಆಗ್ರಹವಾಗಿದೆಎಂದು ಹೇಳಿದ್ಧಾರೆ.

Facebook Comments

Sri Raghav

Admin