ಕಾನ್ಪುರದಲ್ಲಿ 8 ಪೊಲೀಸರ ಮಾರಣಹೋಮ : ಕ್ರಿಮಿನಲ್ ವಿಕಾಸ್ ಸೆರೆಗೆ 25 ತಂಡ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಜು.4-ಉತ್ತರಪ್ರದೇಶದ ಕಾನ್ಪುರದಲ್ಲಿ ನಿನ್ನೆ ಮುಂಜಾನೆ 8 ಪೊಲೀಸರನ್ನು ಹತ್ಯೆಗೈದ ಕುಖ್ಯಾತ ಕ್ರಿಮಿನಲ್ ವಿಕಾಸ್ ದುಬೈ ಮತ್ತು ಆತನ ಸಹಚರರ ಬಂಧನಕ್ಕಾಗಿ 25 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಕಾನ್ಪುರ ಪೊಲೀಸ್ ಮಹಾನಿರೀಕ್ಷಕ ಮೋಹಿತ್ ಅಗರ್‍ವಾಲ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿ ಉತ್ತರ ಪ್ರದೇಶದ ನಗರ, ಜಿಲ್ಲೆಗಳು ಹಾಗೂ ಇತರ ರಾಜ್ಯಗಳಲ್ಲಿ ಹಂತಕರಿಗಾಗಿ ತೀವ್ರ ಶೋಧ ಮುಂದುವರೆದಿದೆ ಎಂದು ಹೇಳಿದರು.

ಈವರೆಗೆ 500ಕ್ಕೂ ಹೆಚ್ಚು ಮೊಬೈಲ್ ಕರೆಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗಿದೆ. ಅತಿಶೀಘ್ರದಲ್ಲೇ ವಿಕಾಸ್ ದುಬೈ ಆತನ ಕ್ರಿಮಿನಲ್ ಪಡೆಯನ್ನು ಬಂಧಿಸುವುದಾಗಿ ಐಜಿ ತಿಳಿಸಿದರು. ವಿಕಾಸ್ ದುಬೈ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ 50 ಸಾವಿರ ರೂ.ಗಳ ಬಹುಮಾನವನ್ನು ಸಹ ಘೋಷಿಸಲಾಗಿದೆ ಎಂದು ಅಗರ್‍ವಾಲ್ ಹೇಳಿದರು.

Facebook Comments