26 ಲಕ್ಷ ಮೊತ್ತದ 250 ಮೊಬೈಲ್ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.6- ಕಾರಿನಲ್ಲಿ ಮೊಬೈಲ್‍ಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 26 ಲಕ್ಷ ರೂ. ಬೆಲೆಯ 250 ಮೊಬೈಲ್ ಫೋನ್‍ಗಳು, ಕೃತ್ಯಕ್ಕೆ ಬಳಸಿದ್ದ ಎರ್ಟಿಗಾ ಕಾರು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರ ಪ್ರದೇಶದ ರಾಜು, ಕೇರಳದ ನಿಸಾಮುದ್ದೀನ್ ಮತ್ತು ತೆಲಂಗಾಣ ಮೂಲದ ಮಹಮ್ಮದ್ ರಫಿ ಬಂಧಿತ ಆರೋಪಿಗಳು.ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತ ಸಿಕ್ಕಿದರೆ ಈ ಮೊಬೈಲ್‍ಗಳನ್ನು ಕಳ್ಳತನ ಮಾಡಲಾಗಿತ್ತೇ ಅಥವಾ ದರೋಡೆ ಮಾಡಿರುವುದೇ ಎಂಬುದು ಗೊತ್ತಾಗಲಿದೆ.
ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ ಎವಿ ರಸ್ತೆಯಲ್ಲಿ ಎರ್ಟಿಗಾ ಕಾರನ್ನು ನಿಲ್ಲಿಸಿಕೊಂಡು ಮೊಬೈಲ್‍ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಇನ್‍ಸ್ಪೆಕ್ಟರ್ ಚಂದ್ರಕಾಂತ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಮೂವರನ್ನು ಬಂಧಿಸಿ ವಿವಿಧ ಕಂಪೆನಿಯ 250 ಮೊಬೈಲ್‍ಗಳು, ಕಾರು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments