2,650 ಕೋಟಿ ವಂಚನೆ ಹಗರಣದಲ್ಲಿ ಮುಂಬೈ ಮೂಲದ ಕಂಪೆನಿಯೊಂದರ ನಿರ್ದೇಶಕ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ED-Department

ನವದೆಹಲಿ, ಮೇ 3-ಸುಮಾರು 2,600 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ದುರ್ಬಳಕೆ ಆರೋಪದಡಿ ಮುಂಬೈ ಮೂಲದ ಕಂಪೆನಿಯೊಂದರ ನಿರ್ದೇಶಕ ಮತ್ತು ಪ್ರವರ್ತಕನೊಬ್ಬನನ್ನು ಬಂಧಿಸಿದೆ. ಈ ಹಗರಣವನ್ನು ದೇಶದ ಅತಿ ದೊಡ್ಡ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಒಂದೆಂದು ಬಣ್ಣಿಸಲಾಗಿದೆ. ಹಣ ದುರ್ಬಳಕೆ ನಿಯಂತ್ರಣ ಕಾಯ್ದೆ (ಪಿಎಂಎಲ್‍ಎ) ಅಡಿ ಮುಂಬೈನಲ್ಲಿ ಮೆಸರ್ಸ್ ಜೂಮ್ ಡೆವೆಲಪರ್ಸ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಮತ್ತು ಮುಖ್ಯ ನಿಯಂತ್ರಕ ವಿಜಯ್ ಎಂ. ಚೌಧರಿಯನ್ನು ಇಡಿ ಆಧಿಕಾರಿಗಳು ಬಂಧಿಸಿದರು.ಈ ದೊಡ್ಡ ಹಗರಣದಲ್ಲಿ ಇಡಿಗೆ ಅಗತ್ಯವಾಗಿ ಬೇಕಾಗಿದ್ದ ಚೌಧರಿ, ತನ್ನ ಸಂಸ್ಥೆ ಮತ್ತು ಪ್ರವರ್ತಕರ ಮೂಲಕ 25 ಬ್ಯಾಂಕ್‍ಗಳಿಗೆ 2,650 ಕೋಟಿ ರೂ.ಗಳನ್ನು ವಂಚಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin