27 ಶಾಸಕರಿಗೆ ಚುನಾವಣಾ ಆಯೋಗ ನೋಟೀಸ್ : ‘ಆಮ್‍ಆದ್ಮಿ’ ಪಕ್ಷಕ್ಕೆ ಮತ್ತೊಂದು ಸಂಕಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

Arvind-Kejriwal-0001

ನವದೆಹಲಿ,ನ.2- ಲಾಭದಾಯಕ ಹುದ್ದೆ ಹೊಂದಿರುವ ಕಾರಣ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯೊಂದರ ಮೇಲೆ ಚುನಾವಣಾ ಆಯೋಗವು ಇಂದು ಆಮ್ ಆದ್ಮಿ ಪಕ್ಷದ (ಎಎಪಿ) 27 ಶಾಸಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಇದರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷಕ್ಕೆ ಹೊಸ ಕಂಟಕ ಉಂಟಾಗಿದೆ. ಎಎಪಿ ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದಾರೆ. ಅವರನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಕಳೆದ ಜೂನ್‍ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ರಾಷ್ಟ್ರಪತಿ ಭವನದಿಂದ ಚುನಾವಣಾ ಆಯೋಗಕ್ಕೆ ಕಳೆದ ತಿಂಗಳು ರವಾನಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು 27 ಎಂಎಲ್‍ಎಗಳಿಗೆ ಶೋಕಾಸ್ ನೋಟಿಸ್ ನೀಡಿ ನವೆಂಬರ್ 11ರೊಳಗೆ ಪ್ರತ್ಯುತ್ತರಗಳನ್ನು ನೀಡುವಂತೆ ಸೂಚಿಸಿದೆ. ದೆಹಲಿ ವಿಧಾನಸಭಾಧ್ಯಕ್ಷ ರಾಮ್‍ವಿಲಾಸ್ ಗೋಯಲ್, ಉಪಾಧ್ಯಕ್ಷ ರಾಕಿ ಬಿರ್ಲ, ಮಾಜಿ ಉಪಸಭಾಧ್ಯಕ್ಷೆ ಬಂದನಕುಮಾರಿ, ಪರಿತ್ಯಕ್ತ ಶಾಸಕ ಮತ್ತು ಸ್ವರಾಜ್ ಅಭಿಯಾನ್ ನಾಯಕ ಪಂಕಜ್ ಪುಷ್ಕರ್ ಸೇರಿದಂತೆ 27 ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin