ಭಾರತದಲ್ಲಿ ಒಂದೇ ದಿನ 27,114 ಮಂದಿಗೆ ಕೊರೋನಾ, 519 ಜನ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.11- ದೇಶಾದ್ಯಂತ ವ್ಯಾಪಿಸುತ್ತಲೇ ಇರುವ ಮಹಾಮಾರಿ ಕೊರೊನಾ ಪ್ರಕರಣಗಳಲ್ಲಿ ಇಂದು ದಾಖಲೆಯ 27,114 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 22,123 ಸಾವಿನ ಸಂಖ್ಯೆ ಏರಿಕೆ ಕಂಡಿದೆ.

ಸದ್ಯ ರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 8 ಲಕ್ಷ ಗಡಿ ದಾಟಿದ್ದು, ನಿನ್ನೆ ಪತ್ತೆಯಾಗಿರುವ ಪ್ರಕರಣಗಳು ಅತಿಹೆಚ್ಚು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆ ಅವಧಿಯಲ್ಲಿ 519 ಜನ ಮೃತಪಟ್ಟಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 22,123ಕ್ಕೆ ಹೆಚ್ಚಳವಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಂತೆ ದೇಶದಲ್ಲಿ ಸದ್ಯ 8,20,916 ಪಾಸಿಟಿವ್ ಪ್ರಕರಣಗಳಿವೆ.

ಇದರಲ್ಲಿ 2,83,407 ಸಕ್ರಿಯ ಪ್ರಕರಣಗಳಿದ್ದರೆ, 5,13,385 ಮಂದಿ ಗುಣಮುಖರಾಗಿದ್ದಾರೆ. ಇದರಲ್ಲಿ ಕೆಲವು ವಿದೇಶಿಯರು ಇದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.

ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಏರಿಕೆಯಾಗಿದ್ದರೂ ್ಲ ಶೇ.62.78ರಷ್ಟು ಗುಣಮುಖರಾಗಿದ್ದಾರೆ. 519 ಮಂದಿ ಮೃತಪಟ್ಟವರಲ್ಲಿ ಮಹಾರಾಷ್ಟ್ರದಲ್ಲೇ ಹೆಚ್ಚಿನವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಮರಾಠರ ನಾಡಿನಲ್ಲಿ 226, ತಮಿಳುನಾಡು 57, ಕರ್ನಾಟಕ 42, ದೆಹಲಿ 27, ಉತ್ತರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 26 ಮಂದಿ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶ 15 ಗುಜರಾತ್ 14, ತೆಲಾಂಗಣ 8, ರಾಜಸ್ಥಾನ 6, ಅಸ್ಸಾಂ, ಜಮ್ಮುಕಾಶ್ಮೀರದಲ್ಲಿ ತಲಾ 5, ಬಿಹಾರ, ಮಧ್ಯಪ್ರದೇಶ, ಒಡಿಶಾ, ಪಂಜಾಬ್‍ನಲ್ಲಿ ತಲಾ ನಾಲ್ವರು, ಹರಿಯಾಣ ಮತ್ತು ಪುದುಚೇರಿಯಲ್ಲಿ ಮೂವರು, ಛತ್ತೀಸ್‍ಘಡದಲ್ಲಿ ಇಬ್ಬರು ಕೊರೊನಾಕ್ಕೆ ಬಲಿಯಾಗಿದ್ದಾರೆ.

Facebook Comments

Sri Raghav

Admin