ಅಕ್ರಮವಾಗಿ ಸಾಗಿಸುತ್ತಿದ್ದ 27 ಮಿಲಿಯನ್ ಡಾಲರ್ ಹಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾನ್‍ಜಿಯೋನ್(ಅಮೆರಿಕ),ಸೆ.2- ಹಡಗಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 27 ಮಿಲಿಯನ್ ಡಾಲರ್ ಹಣವನ್ನು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಅಮೆರಿಕದ ವರ್ಜಿನ್‍ದ್ವೀಪಕ್ಕೆ ತೆರಳುತ್ತಿದ್ದಾಗ ಕಸ್ಟಮ್ಸ್‍ನ ಶ್ವಾನವೊಂದು ಸರಕು ಇಡುವ ಪೆಟ್ಟಿಗೆಯೊಂದನ್ನು ಅಧಿಕಾರಿಗಳಿಗೆ ತೋರಿಸಿದೆ.

ತಕ್ಷಣ ಎಚ್ಚೆತ್ತ ಅಧಿಕಾರಿಗಳು ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಹಡುಗು ಬಂದರು ತಲುಪವವರೆಗೂ ಕಾದು ನಂತರ ತಪಾಸಣೆ ಕೈಗೊಂಡಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. ಆದರೆ ಇಷ್ಟೊಂದು ಹಣ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

Facebook Comments