29,264 ಕೋಟಿ ರೂ. ದಂಡ ಪಾವತಿಸಿದ ಕಾರು ತಯಾರಿಕಾ ಕಂಪನಿ ವೊಲ್ಕ್ಸ್ ವ್ಯಾಗನ್…!

ಈ ಸುದ್ದಿಯನ್ನು ಶೇರ್ ಮಾಡಿ

volkswagen

ವಾಷಿಂಗ್ಟನ್, ಜ.13-ವಾಯು ಮಾಲಿನ್ಯ ತಪಾಸಣೆಯಲ್ಲಿ ಭಾರೀ ವಂಚನೆ ಎಸಗಿದ್ದ ವಿಶ್ವವಿಖ್ಯಾತ ಕಾರು ತಯಾರಿಕಾ ಕಂಪನಿ ಜರ್ಮನಿಯ ವೊಲ್ಕ್ಸ್ ವ್ಯಾಗನ್ ತನ್ನ ತಪ್ಪು ಒಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ 4.3 ಶತಕೋಟಿ ಡಾಲರ್ (29,264 ಕೋಟಿ ರೂ.ಗಳು) ದಂಡ ಪಾವತಿಸಿದೆ. ಜಗತ್ಪ್ರಸಿದ್ದ ಸಂಸ್ಥೆಯೊಂದು ಇಷ್ಟು ಮೊತ್ತದ ಜುಲ್ಮಾನೆ ತೆತ್ತಿರುವುದು ಇದೇ ಮೊದಲು ಹಾಗೂ ಇದೊಂದು ವಿಶ್ವದಾಖಲೆ ಎನ್ನಲಾಗಿದೆ.  ವಾಯು ಮಾಲಿನ್ಯ ತಪಾಸಣೆಯಲ್ಲಿ ದೊಡ್ಡ ಮಟ್ಟದ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮೆರಿಕದ ನ್ಯಾಯಾಲಯವೊಂದು ಈ ಕಂಪನಿಯ ಆರು ಉನ್ನತಾಧಿಕಾರಿಗಳಿಗೆ ಛೀಮಾರಿ ಹಾಕಿದೆ.

ವೊಲ್ಕ್ಸ್ ವ್ಯಾಗನ್ ಮಾಡಿರುವ ವಂಚನೆ ಮತ್ತು ಅದನ್ನು ಮುಚ್ಚಿ ಹಾಕಲು ಅನುಸರಿಸಿದ ಕುತಂತ್ರಗಳನ್ನು ಒಳಗೊಂಡ ವಿವರವಾದ ವರದಿಯನ್ನು ಕಾನೂನು ಸಚಿವಾಲಯ ಬಿಡುಗಡೆ ಮಾಡಿದೆ.
ವ್ಯಾಯು ಮಾಲಿನ್ಯ ತಪಾಸಣೆಯಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ನಂತರ ಸಾಕ್ಷ್ಯಾಧಾರಗಳನ್ನು ನಾಶ ಮಾಡುವಲ್ಲಿ ಈ ಕಂಪನಿಯ 40ಕ್ಕೂ ಹೆಚ್ಚು ಉದ್ಯೋಗಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin