2ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು, ಸರಣಿಯಲ್ಲಿ ಸಮಬಲ ಸಾಧಿಸಿದ ಇಂಗ್ಲೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

Kohli

ಲಂಡನ್.ಜು.15: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತ ಸೋಲೊಪ್ಪಿಕೊಂಡಿದೆ. ಇಲ್ಲಿ ನಡೆದ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 323ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ರನ್ 236ರನ್‌ಗಳಿಗೆ ಆಲೌಟ್ ಆಗಿ ಸೋಲಿಗೆ ಶರಣಾಯಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಅಂತರದಲ್ಲಿ ಇಂಗ್ಲೆಂಡ್ ಸಮಬಲ ಸಾಧಿಸಿತು.

ಆರಂಭಿಕರಾದ ರೋಹಿತ್ ಶರ್ಮಾ 15 ರನ್‌ಗಳಿಸಿ ನಿರ್ಗಮಿಸಿರೆ . ಶಿಖರ್ ಧವನ್ 36 ರನ್‌ ಗಳಿಸಿ ಪೆವಿಲಿಯಂಟ್ ನತ್ತ ಪಯಣ ಬೆಳೆಸಿದರು. ಭರವಸೆಯ ಆಟಗಾರ ಎನಿಸಿದ್ದ ಕೆ. ಎಲ್. ರಾಹುಲ್ ಕೂಡ ಸೊನ್ನೆ ಸುತ್ತುವ ಮೂಲಕ ಗೆಲುವಿನ ನಿರಾಸೆ ಮೂಡಿಸಿದರು. ಕೇವಲ 60 ರನ್‌ಗಳಿಗೆ ಟೀಂ ಇಂಡಿಯಾ3 ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. ಆದರೆ ಕೊಹ್ಲಿ 45 ರನ್ ಸಿಡಿಸಿ ಔಟಾದರೆ, ರೈನಾ 46 ರನ್ ಗಳಿಸಿ ನಿರ್ಗಮಿಸಿದರು. ಈ ಮೂಲಕ ಟೀಂ ಇಂಡಿಯಾದ ಗೆಲುವಿನ ಹಾದಿ ಮತ್ತಷ್ಟು ಕಠಿಣವಾಗಿದೆ.

ಎಂ ಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರೊಡೆಸಿತು. ಆದರೆ ಪಾಂಡ್ಯ 22ರನ್ ಸಿಡಿಸಿ ಔಟಾದರು. ಎಂ ಎಸ್ ಧೋನಿ 37 ರನ್ ಸಿಡಿಸಿ ಔಟಾದರು. ಆದರೆ ಧೋನಿ 33ರನ್ ಪೂರೈಸುತ್ತಿದ್ದಂತೆ, ಏಕದಿನ ಕ್ರಿಕೆಟ್‌ನಲ್ಲಿ 10ಸಾವಿರ ರನ್ ಪೂರೈಸಿದ ಭಾರತದ 4ನೇ ಹಾಗೂ ವಿಶ್ವದ 12ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

ಉಮೇಶ್ ಯಾದಲ್, ಕುಲದೀಪ್ ಯಾದವ್, ಸಿದ್ಧಾರ್ಥ್ ಕೌಲ್, ಯಜುವೇಂದ್ರ ಚೆಹಾಲ್ ಅಬ್ಬರಿಸಲಿಲ್ಲ. ಹೀಗಾಗಿ ಭಾರತ ನಿಗಧಿತ 50 ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ 86ರನ್ ಗೆಲುವು ಸಾಧಿಸಿತು. 2ನೇ ಪಂದ್ಯದ ಗೆಲವಿನೊಂದಿಗೆ ಸರಣಿ 1-1 ಅಂತರದಲ್ಲಿ ಸಮಭಲಗೊಂಡಿದೆ.  ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 322 ರನ್ ಸಿಡಿಸಿತು. ಜೋ ರೂಟ್ ಭರ್ಜರಿ ಅಜೇಯ 113 ರನ್ ಸಿಡಿಸೋ ಮೂಲಕ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು.

ಸಂಕ್ಷಿಪ್ತ ಸ್ಕೋರ್ :
ಇಂಗ್ಲೆಂಡ್ : 322/7
ಭಾರತ : 236 (50 ov)

Facebook Comments

Sri Raghav

Admin