ಸ್ಪಿನ್ ಮೋಡಿಗೆ ನಲುಗಿದ ವಿಂಡೀಸ್ ದಾಂಡಿಗರು, ಪ್ರಾಬಲ್ಯ ಸಾಧಿಸಿದ ಕೊಹ್ಲಿ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

KOhlin-----01
ಹೈದ್ರಾಬಾದ್, ಅ.12- ಮುತ್ತಿನ ನಗರಿ ಹೈದ್ರಾಬಾದ್‍ನಲ್ಲಿ ಇಂದಿನಿಂದ ಆರಂಭಗೊಂಡಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ 2ನೆ ಟೆಸ್ಟ್ ನಲ್ಲಿ ಭಾರತ ತಂಡವು ಆರಂಭಿಕ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈಗೊಂಡ ಪ್ರವಾಸಿಗರು, ಭಾರತದ ಸ್ಪಿನ್ನರ್ ಗಳ ಮೋಡಿಗೆ ತಲೆಬಾಗಿ 115 ರನ್‍ಗಳಿಗೆ 5 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.  ಎರಡು ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಹಿನ್ನೆಡೆ ಅನುಭವಿಸಿದ್ದ ವಿಂಡೀಸ್ ತಂಡದ ನಾಯಕ ಜಸ್ಟಿನ್ ಹೋಲ್ಡರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು.

# ಬರ್ತ್‍ವೇಟ್- ಪೊವೆಲ್ ಉತ್ತಮ ಆರಂಭ:
ಮೊದಲ ಟೆಸ್ಟ್‍ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿಂಡೀಸ್‍ನ ಆರಂಭಿಕ ದಾಂಡಿಗರು ಇಂದು ಬ್ಯಾಟಿಂಗ್ ಲಯಕ್ಕೆ ಮರಳಿದ್ದು ಮೊದಲ ವಿಕೆಟ್‍ಗೆ 32 ರನ್‍ಗಳ ಜೊತೆಯಾಟ ನೀಡುವ ಮೂಲಕ ಬೃಹತ್ ಮೊತ್ತವನ್ನು ಪೇರಿಸುವ ಸೂಚನೆ ನೀಡಿದ್ದರು. ಭಾರತದ ನಾಯಕ ವಿರಾಟ್ ಕೊಹ್ಲಿ ಈ ಜೋಡಿಯನ್ನು ಬೇರ್ಪಡಿಸಲು 12 ಓವರ್‍ವರೆಗೂ ಕಾಯಬೇಕಾಯಿತು. ಟೀಂ ಇಂಡಿಯಾದ ಟಾಪ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಸ್ಪಿನ್ ಮೋಡಿಯ ಮೂಲಕ ಪೊವೆಲ್ ( 22 ರನ್, 4 ಬೌಂಡರಿ)ರನ್ನು ಡಗ್‍ಔಟ್‍ನತ್ತ ಹೆಜ್ಜೆ ಹಾಕುವಂತೆ ಮಾಡಿದರು. ಡ್ರಿಂಕ್ಸ್ ವೇಳೆಗೆ ವಿಂಡೀಸ್ 1 ವಿಕೆಟ್ ಕಳೆದುಕೊಂಡು 40 ರನ್ ಗಳನ್ನು ಗಳಿಸಿತ್ತು. ಡ್ರಿಂಕ್ಸ್ ನಂತರ ಭರ್ಜರಿ ಹೊಡೆತಕ್ಕೆ ಕೈ ಹಾಕಲು ಮುಂದಾದ ಆರಂಭಿಕ ದಾಂಡಿಗ ಬರ್ತ್‍ವೇಟ್(14 ರನ್, 2 ಬೌಂಡರಿ), ಕುಲ್‍ದೀಪ್‍ಯಾದವ್‍ರ ಸ್ಪಿನ್ ಬಲೆಗೆ ಬಿದ್ದರು.

# ಹೋಪ್ ಅಲ್ಪ ಹೋರಾಟ:
ವೆಸ್ಟ್‍ಇಂಡೀಸ್‍ನ ಆರಂಭಿಕ ದಾಂಡಿಗರು ಪೆವಿಲಿಯನ್ ಸೇರಿಕೊಂಡ ನಂತರ ರನ್ ಕಟ್ಟುವ ಜವಾಬ್ದಾರಿ ಹೊತ್ತ ಒನ್‍ಡೌನ್ ಬ್ಯಾಟ್ಸ್‍ಮನ್ ಹೋಪ್ 5ಬೌಂಡರಿ ಸೇರಿದಂತೆ 36 ರನ್‍ಗಳನ್ನು ಗಳಿಸಿ ತಂಡಕ್ಕೆ ಆಸರೆಯಾದರು. ವೇಗಿ ಉಮೇಶ್‍ಯಾದವ್‍ರ ಬೌಲಿಂಗ್ ಗತಿಯನ್ನು ಅರಿಯದೆ ಎಲ್‍ಬಿಡಬ್ಲ್ಯು ಬಲೆಗೆ ಬೀಳುವ ಮೂಲಕ ವಿಂಡೀಸ್‍ಗೆ ಮತ್ತೊಂದು ಹೊಡೆತ ಬಿತ್ತು. ಭೋಜನ ವಿರಾಮದ ವೇಳೆಗೆ ವೆಸ್ಟ್ ಇಂಡೀಸ್ 3 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿತು. ಭಾರತದ ಬೌಲಿಂಗ್ ಎದುರು ರನ್ ಕದಿಯಲು ಪರದಾಡಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳಾದ ಎಸ್.ವಿ.ಆ್ಯಂಬರಿಶ್ (18 ರನ್, 3 ಬೌಂಡರಿ) ಹಾಗೂ ಹೇತ್‍ಮೇರ್ (12 ರನ್,2 ಬೌಂಡರಿ) ಕೂಡ ಯುವ ಸ್ಪಿನ್ನರ್ ಕುಲ್‍ದೀಪ್ ಯಾದವ್‍ರ ಸ್ಪಿನ್ ಬೌಲಿಂಗ್‍ಗೆ ಬಲಿಯಾದರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ವೆಸ್ಟ್‍ಇಂಡೀಸ್ ತಂಡವು 54 ಓವರ್‍ಗಳಲ್ಲಿ 5 ವಿಕೆಟ್‍ಗಳನ್ನು ಕಳೆದುಕೊಂಡು 164 ರನ್ ಗಳನ್ನು ಗಳಿಸಿತ್ತು. ಚೇಸ್ (39 ರನ್, 4 ಬೌಂಡರಿ, 1 ಸಿಕ್ಸರ್), ವಿಕೆಟ್ ಕೀಪರ್ ಡ್ರೋವಿಚ್ (20 ರನ್, 3 ಬೌಂಡರಿ) ಕ್ರೀಸ್‍ನಲ್ಲಿದ್ದರು.

Facebook Comments