3ನೇ ಮತ್ತು ಅಂತಿಮ ಮುಖಾಮುಖಿ ಚರ್ಚೆಯಲ್ಲಿ ತಾರಕಕ್ಕೇರಿದ ಟ್ರಂಪ್-ಹಿಲರಿ ವಾಕ್ಸಮರ

ಈ ಸುದ್ದಿಯನ್ನು ಶೇರ್ ಮಾಡಿ

Trump[

ಲಾಸ್ ವೆಗಾಸ್, ಅ.20- ಅಮೆರಿಕ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೊಮೊಕ್ರಾಟ್ ಪಕ್ಷದ ಹಿಲರಿ ನಡುವೆ ಇಲ್ಲಿ ಇಂದು ನಡೆದ ಮೂರನೇ ಮತ್ತು ಅಂತಿಮ ಮುಖಾಮುಖಿ ಚರ್ಚೆಯು ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಯಿತು. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇವರ ನಡುವೆ ವಾದ-ವಾಗ್ವಾದ, ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಯಿತು.ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಚರ್ಚೆಗೆ ಆರಂಭವಾಗುವುದಕ್ಕೂ ಮುನ್ನ ಪರಸ್ಪರ ಹಸ್ತಲಾಘವ ಮಾಡುವುದು ವಾಡಿಕೆ. ಆದರೆ ಕಳೆದ ಎರಡು ಚರ್ಚೆಗಳಿಂದ ಟ್ರಂಪ್ ಮತ್ತು ಹಿಲರಿ ನಡುವಣ ವೈಷಮ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಕೈಕುಲುಕದೇ ಮುಖಾಮುಖಿ ಚರ್ಚೆಯಲ್ಲಿ ಪರಸ್ಪರ ವಾಗ್ದಾಳಿ ನಡೆಸಿದರು.

ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಹೊಂದಲು ಅವಕಾಶ ನೀಡುವ ದ್ವಿತೀಯ ತಿದ್ದುಪಡಿಯನ್ನು ತಾವು ಎತ್ತಿ ಹಿಡಿಯುವುದಾಗಿ ಟ್ರಂಪ್ ಹೇಳಿದರೆ, ಹಿಲರಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಹತ್ಯಾಕಾಂಡಗಳು ವ್ಯಾಪಕವಾಗಿ ಹೆಚ್ಚಾಗುತ್ತದೆ. ನಾಗರಿಕರು ಅಸ್ತ್ರಗಳನ್ನು ಹೊಂದಲು ಅನುಮತಿಗೆ ಬೆಂಬಲ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‍ರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.ವಿವಿಧ ವಿಷಯಗಳ ಬಗ್ಗೆ ಇವರಿಬ್ಬರ ನಡುವೆ ಏರಿದ ಧ್ವನಿಯಲ್ಲಿ ವಾಕ್ಸಮರ ನಡೆಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin