3 ಕರಡಿಗಳ ದಾಳಿಗೆ ಬಲಿಯಾದ ರೈತ ಪುಟ್ಟಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

TUMAKURU-3

ತುಮಕೂರು, ಆ.18- ಜಿಲ್ಲೆಯಲ್ಲಿ ಮತ್ತೆ ಬೆಚ್ಚಿಬೀಳುವಂತಹ ಕರಡಿ ದಾಳಿ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವನಹಳ್ಳಿ ಗ್ರಾಮದ ಪುಟ್ಟಯ್ಯ (60) ಮೂರು ಕರಡಿಗಳ ದಾಳಿಯಿಂದ ಬರ್ಬರವಾಗಿ ಸಾವನ್ನಪ್ಪಿದ್ದಾರೆ.ಬೆಳಗ್ಗೆ ತೋಟದಿಂದ ಮನೆಗೆ ಬರುವಾಗ ದಾಳಿ ಮಾಡಿದ ಕರಡಿಗಳು ತಲೆ ಹಾಗೂ ಮುಖವನ್ನು ಕಿತ್ತು ಗಂಭೀರವಾಗಿ ಗಾಯಗೊಳಿಸಿದ್ದವು. ಕೂಡಲೇ ಚಿಕಿತ್ಸೆಗೆಂದು ಹಾಸನಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪುಟ್ಟಯ್ಯ ಸಾವನ್ನಪ್ಪಿದ್ದಾರೆ. ಪುಟ್ಟಯ್ಯನ ಮೇಲೆ ನಡೆದ ಕರಡಿ ದಾಳಿ ಕಳೆದ ವರ್ಷ ಮಧುಗಿರಿಯಲ್ಲಿ ನಡೆದಿದ್ದ ಇಬ್ಬರು ರೈತರ ಮೇಲಿನ ದಾಳಿಯನ್ನು ನೆನಪಿಸುವಷ್ಟು ಭಯಾನಕವಾಗಿತ್ತು. ತುಮಕೂರಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯೇ ಈ ಕರಡಿ ದಾಳಿಗೆ ಕಾರಣವಾಗಿದೆ.ಕಲ್ಲು ಗಣಿಗಾರಿಕೆಯಿಂದ ಕರಡಿಗಳು ಕಾಡು ಬಿಟ್ಟು ನಾಡಿಗೆ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಈ ದಾಳಿಗೆ ಇಂದು ಪುಟ್ಟಯ್ಯ ಬಲಿಯಾಗಿದ್ದು, ನಾಳೆ ಮತ್ತೆ ಯಾರು ಬಲಿಯಾಗುತ್ತಾರೋ ಎಂದು ಜನ ಆತಂಕದಲ್ಲಿ ಕಾಲ ಹಾಕುತ್ತಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin