ಪ್ರೇಕ್ಷಕರ ಮನ ಗೆದ್ದ ‘ಬಿಟ್ಟಿ ಬಿಲ್ಡಪ್’ ಹಾಡು

ಈ ಸುದ್ದಿಯನ್ನು ಶೇರ್ ಮಾಡಿ

3-30-30
ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ಬರುತ್ತಿರುವ ಬಹುತೇಕ ಚಿತ್ರಗಳ ಶೀರ್ಷಿಕೆ ಹಾಗೂ ವಿನ್ಯಾಸಗಳು ಪ್ರೇಕ್ಷಕರ ಗಮನವನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಕಥಾ ಹಂದರವೂ ಕೂಡ ಕೆಲವು ಚಿತ್ರಗಳಲ್ಲಿ ವಿಭಿನ್ನವಾಗಿದ್ದು, ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಆ ನಿಟ್ಟಿನಲ್ಲಿ ನಾವು ಕೂಡ ಬರುತ್ತಿದ್ದೇವೆ ಎನ್ನುತ್ತಿದೆ 3 ಘಂಟೆ 30 ದಿನ 30 ಸೆಕೆಂಡ್ ಚಿತ್ರ. ಇತ್ತೀಚೆಗಷ್ಟೇ ಇದರ ಆಡಿಯೋ ಜ್ಯೂಕ್ ಬಾಕ್ಸ್ ರಿಲೀಸ್ ಆಗಿದ್ದು ಕೇವಲ 3 ದಿನಗಳಲ್ಲಿ ಸುಮಾರು 70 ಸಾವಿರ ಜನ ಹಾಡನ್ನು ನೋಡಿ ಮೆಚ್ಚಿದ್ದಾರೆ. ಅದರಲ್ಲೂ ಈ ಚಿತ್ರದ ಬಿಟ್ಟಿ ಬಿಲ್ಡಪ್ ಮಾಡಬೇಡ ಹಾಡು ಅತಿ ಹೆಚ್ಚು ಜನಪ್ರಿಯವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಮಕ್ಕಳು ಈ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋಗಳು ಸಾಮಾಜಿಕ ಜಾಲ ತಾಣ ದಲ್ಲಿ ಅತಿ ಹೆಚ್ಚು ವೈರಲ್ ಆಗುತ್ತಿದೆ.

ಇದರಿಂದ ಉತ್ಸುಕಗೊಂಡ ಚಿತ್ರ ತಂಡ ಅತ್ಯುತ್ತಮ ಫ್ಯಾನ್ ಮೇಡ್ ಹಾಡನ್ನು ಚಿತ್ರದೊಳಗೆಯೇ ಬಳಸಿಕೊಳ್ಳುವ ಬಗ್ಗೆ ಆಲೋಚನೆ ಮಾಡುತ್ತಿದೆ ಮತ್ತು ಅತಿ ಹೆಚ್ಚು ಕ್ರಿಯೇಟಿವ್ ಹೊಂದಿರುವ ಹಾಡಿಗೆ ಉತ್ತಮ ಬಹುಮಾನ ನೀಡಲು ನಿರ್ಧರಿಸಿದೆ. ಬ್ರೈನ್ ಶೇರ್ ಕ್ರಿಯೇಶನ್ಸ್ ಲಾಂಛನದಲ್ಲಿ ಜಿ.ಕೆ.ಮಧುಸೂದನ್ ನಿರ್ದೇಶಿಸಿರುವ 3 ಘಂಟೆ 30ದಿನ 30 ಸೆಕೆಂಡ್ ಚಿತ್ರದ ಒಂದು ಹಾಡನ್ನು ಜಯಂತ್ ಕಾಯ್ಕಿಣಿಯವರು ಬರೆದಿದ್ದು, ಉಳಿದ ಎಲ್ಲಾ ಹಾಡನ್ನು ನಿರ್ದೇಶಕ ಮಧುಸೂಧನ್‍ರವರೇ ಬರೆದಿದ್ದಾರೆ. ಈ ಚಿತ್ರವನ್ನು ಚಂದ್ರಶೇಖರ್ ಆರ್.ಪದ್ಮಶಾಲಿ ನಿರ್ಮಿಸಿದ್ದು, ಚಿತ್ರಕ್ಕೆ ಬೇಕಾದಂತಹ ಎಲ್ಲಾ ಸವಲತ್ತುಗಳನ್ನು ಅಚ್ಚುಕಟ್ಟಾಗಿ ಒದಗಿಸಿದ್ದಾರೆ. ಇವರೊಂದಿಗೆ ಸ್ನೇಹಿತರು ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ಜಾಹಿರಾತು ಕ್ಷೇತ್ರದಲ್ಲಿ ಬಹಳಷ್ಟು ಹೆಸರನ್ನು ಮಾಡಿರುವಂತಹ ಬಳಗ ಸೇರಿಕೊಂಡು ಈ ವಿಭಿನ್ನ ಬಗೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧರಾಗಿದ್ದಾರೆ. ಈ ಚಿತ್ರಕ್ಕೆ ಶ್ರೀಧರ್ ವಿ.ಸಂಭ್ರಮ್ ಸಂಗೀತ ನೀಡಿದ್ದಾರೆ. ಇದೊಂದು ಯೂತ್ ಜನರೇಶನ್ ಕಥೆಯಾಗಿದ್ದು, ಅರುಣ್ ಗೌಡ, ಕಾವ್ಯ ಶೆಟ್ಟಿ ನಾಯಕ, ನಾಯಕಿಯರಾಗಿದ್ದು, ರಮೇಶ್ ಭಟ್, ಸುಧಾರಾಣಿ , ದೇವರಾಜ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಶ್ರೀನಿವಾಸ ರಾಮಯ್ಯ ಛಾಯಾಗ್ರಹಣವಿರುವ ಚಿತ್ರ ಸದ್ಯದಲ್ಲಿಯೇ ಬೆಳ್ಳಿ ಪರದೆಯ ಮೇಲೆ ಬರಲಿದೆ.

Facebook Comments

Sri Raghav

Admin