3 ದಿನ ಪ್ರಧಾನಿ ಜಪಾನ್ ಪ್ರವಾಸ : ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

Japan-02

ನವದೆಹಲಿ, ನ.10-ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ದಿನಗಳ ಕಾಲ ಉದಯರವಿ ನಾಡು ಜಪಾನ್‍ಗೆ ಭೇಟಿ ಆರಂಭಿಸಿದ್ದು, ನಾಗರಿಕ ಪರಮಾಣು ಯೋಜನೆಗೆ ಆ ದೇಶದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಅಲ್ಲದೇ ವಾಣಿಜ್ಯ-ವ್ಯಾಪಾರ, ಬಂಡವಾಳ ಹೂಡಿಕೆ ಮತ್ತು ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಗೆ ಸಮಾಲೋಚನೆ ನಡೆಸಲಿದ್ದಾರೆ.  ಮೋದಿ ಜಪಾನ್ ಭೇಟಿ ವೇಳೆ ಭಾರತದ ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆಯ ತ್ವರಿತ ಅನುಷ್ಠಾನಕ್ಕೆ ಮತ್ತಷ್ಟು ವೇಗ ಲಭಿಸಲಿದೆ.
ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ಜಪಾನ್‍ಗೆ ಭೇಟಿ ನೀಡಿರುವ ಮೋದಿ ಟೋಕಿಯೋದಲ್ಲಿ ತಮ್ಮ ಸಹವರ್ತಿ ಶಿನ್‍ಝೋ ಅಬೆ ಅವರೊಂದಿಗೆ ವಾರ್ಷಿಕ ಶೃಂಗಸಭೆಯಲ್ಲಿ ಮಾತುಕತೆ ನಡೆಸುವರು ಹಾಗೂ ಚಕ್ರವರ್ತಿ ಅವರನ್ನು ಭೇಟಿ ಮಾಡುವರು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟರ್‍ನಲ್ಲಿ ಮಾಹಿತಿ ನೀಡಿದ್ದಾರೆ.

ಜಪಾನ್ ಭೇಟಿ ವೇಳೆ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಪ್ರಧಾನಿ ಅಬೆ ಅವರೊಂದಿಗೆ ಶಿನ್‍ಕಾನ್‍ಸೆನ್ ಬುಲೆಟ್ ಟ್ರೈನ್‍ನಲ್ಲಿ ಕೋಬ್ ಪಟ್ಟಣಕ್ಕೆ ತೆರಳುವ ಮೋದಿ ಹೈ ಸ್ಪೀಡ್ ರೈಲುಗಳನ್ನು ತಯಾರಿಸುವ ಕವಾಸಾಕಿ ಹೆವಿ ಇಂಡಸ್ಟ್ರೀಸ್ ಘಟಕಕ್ಕೆ ಭೇಟಿ ನೀಡುವರು.  ಜಪಾನ್ ಮತ್ತು ಭಾರತದ ನಡುವೆ ವಾಣಿಜ್ಯ-ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಕ್ಷೇತ್ರಗಳಲ್ಲಿನ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವುದಾಗಿ ಮೋದಿ ನಿನ್ನೆ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.  ಜಪಾನ್‍ಗೆ ತೆರಳುವ ಮುನ್ನ ಬ್ಯಾಂಕಾಕ್‍ನಲ್ಲಿ ಥೈಲೆಂಡ್ ಚಕ್ರವರ್ತಿ ಭೂಮಿಬೋಲ್ ಅದುದ್ಯಾದೆಜ್ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin