3 ದೇಶಗಳ ಯಶಸ್ವಿ ಪ್ರವಾಸ ಮುಗಿಸಿ ಸ್ವದೇಶಕ್ಕೆ ಹಿಂದಿರುಗಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-0021

ನವದೆಹಲಿ, ಜೂ.28-ಪೋರ್ಚುಗಲ್, ಅಮೆರಿಕ ಮತ್ತು ನೆದರ್‍ಲೆಂಡ್ಸ್-ಈ ಮೂರು ರಾಷ್ಟ್ರಗಳಲ್ಲಿ ನಾಲ್ಕು ದಿನಗಳ ಕಾಲ ಯಶಸ್ವಿ ಪ್ರವಾಸ ಪೂರ್ಣಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಸ್ವದೇಶಕ್ಕೆ ಹಿಂದಿರುಗಿದರು. ದೆಹಲಿಗೆ ಹಿಂದಿರುಗಿದ ಅವರನ್ನು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಬರಮಾಡಿಕೊಂಡರು.  ನಾಲ್ಕು ದಿನಗಳ ವಿದೇಶಿ ಪ್ರವಾಸದಲ್ಲಿ ಅಮೆರಿಕ ಭೇಟಿ ಅತ್ಯಂತ ಪ್ರಮುಖವಾಗಿತ್ತು. ಜೂ.26ರಂದು ವಾಷಿಂಗ್ಟನ್‍ನಲ್ಲಿ ಮೊದಲ ಬಾರಿಗೆ ಅಧ್ಯಕ್ಷ ಟ್ರಂಪ್ ಅವರನ್ನು ಮೋದಿ ಭೇಟಿ ಮಾಡಿ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಹಕಾರ ಕುರಿತು ಗಹನ ಮಾತುಕತೆ ನಡೆಸಿದರು.

Modi--01

ಉಗ್ರಗಾಮಿ ಸಂಘಟನೆಗಳನ್ನು ನಿರ್ಮೂಲನೆ ಮಾಡಲು ಪಣ ತೊಟ್ಟ ಮೋದಿ ಮತ್ತು ಟ್ರಂಫ್, ಏಷ್ಯಾ ಖಂಡದ ನೆರೆಹೊರೆ ದೇಶಗಳ ಮೇಲೆ ಭಯೋತ್ಪಾದನೆ ದಾಳಿ ನಡೆಸಲು ತನ್ನ ನೆಲದಲ್ಲಿ ಅವಕಾಶ ನೀಡಬಾರದು ಎಂದು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶದೊಂದಿಗೆ ಎಚ್ಚರಿಕೆ ನೀಡಿದ್ದರು.   ತಮ್ಮ ಮೂರು ರಾಷ್ಟ್ರಗಳ ವಿದೇಶ ಪ್ರವಾಸದ ಮೊದಲ ಚರಣವಾಗಿ ಮೋದಿ ಪೋರ್ಚುಗಲ್‍ಗೆ ಭೇಟಿ ನೀಡಿ ತಮ್ಮ ಸಹವರ್ತಿ ಅಂಟೋನಿಯೋ ಕೋಸ್ಟಾ ಅವರೊಂದಿಗೆ ವ್ಯಾಪಕ ಶ್ರೇಣಿಯ ಮಾತುಕತೆ ನಡೆಸಿದರು. ಅಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಪೋರ್ಚುಗಲ್ ಪ್ರಧಾನಿ ಕೋಸ್ಟಾ ಅವರಿಗೆ ಭಾರತದ ಸಾಗರೋತ್ತರ ಪೌರತ್ವ ಚೀಟಿಯನ್ನು ನೀಡಿದರು.

ತಮ್ಮ ಕೊನೆ ಹಂತದ ಪ್ರವಾಸದಲ್ಲಿ ನೆದರ್‍ಲೆಂಡ್ಸ್‍ನಲ್ಲಿ ತಮ್ಮ ಸಹವರ್ತಿ ಮಾರ್ಕ್ ರುಟ್ಟೆ ಅವರನ್ನು ಭೇಟಿ ಮಾಡಿದರು. ಅಲ್ಲೂ ಸಹ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin