3 ಮಕ್ಕಳ ತಂದೆ ಜೊತೆ ಹುಡುಗಿಗಾಯ್ತು ಲವ್ : ಮದುವೆಗೆ ಮನೆಯವರೊಪ್ಪದಿದ್ದಾಗ ಆತ್ಮಹತ್ಯೆಗೆ ಯತ್ನಿಸಿದ ಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Love-Couple

ಚಿಕ್ಕಬಳ್ಳಾಪುರ,ಡಿ.15-ಈ ಚಪಲ ಚನ್ನಿಗರಾಯನಿಗೆ ಆಗ್ಲೇ ಮದುವೆಯಾಗಿ ಮೂರು ಮಕ್ಳಿವೆಯಂತೆ ರೀ… ಆದರೂ ಇನ್ನೊಂದು ಹುಡುಗಿ ಬೇಕು ಅಂತಾ ಎದುರು ಮನೆ ಹುಡುಗಿಗೆ ಕಾಳ್ ಹಾಕಿಯೇ ಬಿಟ್ಟ. ಹೇಗೋ ಇವನ ಲವ್ ಸಕ್ಸಸ್ ಆಯ್ತು. ಒಬ್ಬರನ್ನೊಬ್ಬರು ಪ್ರೀತಿ ಮಾಡೇ ಬಿಟ್ರು. ಏನಿದು ಲವ್ ಸ್ಟೋರಿ ಅಂತಿರಾ..? ಗುಡಿಬಂಡೆ ತಾಲ್ಲೂಕಿನ ಪೆರೇಸಂದ್ರ ಗ್ರಾಮದ ವೆಂಕಟೇಶಪ್ಪ ಎಂಬುವವನಿಗೆ ಮದುವೆಯಾಗಿ ಮೂರು ಮಕ್ಕಳಿವೆ. ಆದರೂ ಎದುರು ಮನೆ ಹುಡುಗಿ ಮೇಲೆ ಪ್ರೇಮಾಂಕುರವಾಗಿ ಲವ್ ಮಾಡಿದರು. ಮದುವೆಯಾಗುವುದಾಗಿ ತೀರ್ಮಾನ ಸಹ ಕೈಗೊಂಡಿದ್ದರು. ಆದರೆ ಈ ವಿಷಯ ಮನೆಯವರಿಗೆ ತಿಳಿದು ಮದುವೆ ನಿರಾಕರಿಸಿದ್ದರು.

ಆದ್ದರಿಂದ ಚಿಕ್ಕಬಳ್ಳಾಪುರ ಹೊರವಲಯದಲ್ಲಿ ಇಬ್ಬರು ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಇವರನ್ನು ಕಂಡ ಸ್ಥಳೀಯರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.   ಈ ಸಂಬಂಧ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin