3 ಮಕ್ಕಳ ಸಾವು ಪ್ರಕರಣ : ಮಾಜಿ ಶಾಸಕ ಕಿರಣ್‍ಕುಮಾರ್ ಪೊಲೀಸರ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Huliyaru-Kiran-Kuamr

ಹುಳಿಯಾರು,ಮಾ.9-ವಿದ್ಯಾವಾರಿಧಿ ವಸತಿ ಶಾಲೆ ಮೂವರು ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕಿರಣ್‍ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರೆಸಿಡೆನ್ಸಿ ಶಾಲೆಯಲ್ಲಿ ಊಟ ಮಾಡಿದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಳಿಯಾರು ಠಾಣೆ ಪೊ ಲೀಸರು ಕಿರಣ್‍ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. [ ಇದನ್ನೂ ಓದಿ : ಹುಳಿಯಾರು ಶಾಲೆಯಲ್ಲಿ ವಿಷ ಮಿಶ್ರಿತ ಆಹಾರ ಸೇವಿಸಿ ಮೂರು ಮಕ್ಕಳ ಸಾವು ] ಮೂವರು ವಿದ್ಯಾರ್ಥಿಗಳ ಸಾವಿನ ಹಿನ್ನೆಲೆಯಲ್ಲಿ ಪೋಷಕರು, ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಿದ್ದು , ಕಿರಣ್‍ಕುಮಾರ್ ಅವರನ್ನು ವಶಕ್ಕೆ ಪಡೆದಿರುವ ಪೊ ಲೀಸರು ಘಟನೆ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.         [

+ ಪೋಷಕರು ಹಾಗೂ ಸಾರ್ವಜನಿಕರು ಭಾರೀ ಪ್ರತಿಭಟನೆ

ಹುಳಿಯಾರು,ಮಾ.9-ಮೂವರು ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಮಾಜಿ ಶಾಸಕ ಕಿರಣ್‍ಕುಮಾರ್ ಅವರ ವಿರುದ್ಧ ಪೋಷಕರು ಹಾಗೂ ಸಾರ್ವಜನಿಕರು ಭಾರೀ ಪ್ರತಿಭಟನೆ ನಡೆಸಿದರು.
ವಿಷ ಆಹಾರ ಸೇವನೆಯಿಂದ ದುರ್ಘಟನೆ ಸಂಭವಿಸಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ನಂತರ ಹಾಸ್ಟೆಲ್‍ಗೆ ಭೇಟಿ ನೀಡಿದ ಅವರನ್ನು ನೂರಾರು ಜನ ಮುತ್ತಿಗೆ ಹಾಕಿ ಎಳೆದಾಡಿದರು.
ಲಕ್ಷಾಂತರ ರೂ. ಕೊಟ್ಟು ನಮ್ಮ ಮಕ್ಕಳನ್ನು ನಿಮ್ಮ ಶಾಲೆಗೆ ಸೇರಿಸಿದ್ದೇವೆ. [ ಇದನ್ನೂ ಓದಿ :  ಫುಡ್ ಪಾಯಿಸನ್’ನಿಂದ 3 ಮಕ್ಕಳ ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ]  ನೀವು ಈ ರೀತಿ ಮಾಡುವುದೇ ಎಂದು ಹರಿಹಾಯ್ದಿದ್ದಾರೆ. ತಪ್ಪು ಯಾರದೇ ಇರಲಿ ಇದರ ಹೊಣೆಯನ್ನು ನೀವೇ ಹೊರಬೇಕು ಎಂದು ಅವರ ಮೇಲೆ ಮುಗಿಬಿದ್ದಿದ್ದಾರೆ.   ಚಿಕ್ಕನಾಯಕನಹಳ್ಳಿ ಪೊ ಲೀಸರ ಮಧ್ಯಪ್ರವೇಶದಿಂದ ಸಂಭಾವ್ಯ ಅನಾಹುತ ತಪ್ಪಿದೆ. ಪೊ ಲೀಸರು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಷವಿಟ್ಟರೇ ವಿದ್ಯಾರ್ಥಿಗಳಿಗೆ..?

ಘಟನೆಯಿಂದ ನನಗೂ ತೀವ್ರ ಬೇಸರವಾಗಿದೆ. ಯಾರೋ ಕಿಡಿಗೇಡಿಗಳು ಅಡುಗೆ ಮಾಡುವ ಸಂದರ್ಭದಲ್ಲಿ ವಿಷ ಸಿಂಪಡಿಸಿರುವ ಬಗ್ಗೆ ಅನುಮಾನ ಬಂದಿದೆ. ಶಾಲೆಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿರುವ ಸಾಧ್ಯತೆ ಇದೆ. ಸಿದ್ದಪಡಿಸಿರುವ ಆಹಾರವನ್ನು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ವಿದ್ಯಾರ್ಥಿಗಳ ಸಾವಿನಿಂದ ನನಗೂ ಆಘಾತವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕಿರಣ್‍ಕುಮಾರ್ ಹೇಳಿದ್ದಾರೆ.   ಹಾಸ್ಟೆಲ್‍ನಲ್ಲಿರುವ ವಿದ್ಯಾರ್ಥಿಗಳ ಪೋಷಕರು ಭಾರೀ ಪ್ರತಿಭಟನೆ ಹಮ್ಮಿಕೊಂಡಿದ್ದು , ಆಡಳಿತ ಮಂಡಳಿ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು, ಶಾಲೆಯನ್ನು ಮುಚ್ಚಬೇಕು ಎಂದು ಕೆಲವರು ಆಗ್ರಹಿಸಿದರು.

ಸ್ಥಳದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ತಹಸೀಲ್ದಾರ್ ಗಂಗೇಶ್, ಆಹಾರ ನಿರೀಕ್ಷಕ ನಾರಾಯಣ್ ಮುಂತಾದವರು ಬೀಡು ಬಿಟ್ಟಿದ್ದಾರೆ.   ಜಿಲ್ಲಾ ಪೊ ಲೀಸ್ ವರಿಷ್ಠಾಧಿಕಾರಿ ಇಶಾಪಂತ್, ಡಿಸಿ ಕೆ.ಪಿ.ಮೋಹನ್‍ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಿಕ್ಷಣ ಇಲಾಖೆ ಮತ್ತು ಪೊ ಲೀಸ್ ಇಲಾಖೆಗೆ ತನಿಖೆಗೆ ಆದೇಶಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin