3 ಲಕ್ಷ ರೂ. ಮೇಲ್ಪಟ್ಟ ನಗದು ವಹಿವಾಟು ಬ್ಯಾನ್..?

ಈ ಸುದ್ದಿಯನ್ನು ಶೇರ್ ಮಾಡಿ

Money-01

ನವದೆಹಲಿ, ಆ.22- ಕಪ್ಪು ಹಣ ನಿಯಂತ್ರಣ ನಿಟ್ಟಿನಲ್ಲಿ 3 ಲಕ್ಷ ರೂ.ಗಳಿಗೆ ಮೇಲ್ಪಟ್ಟ ನಗದು ವ್ಯವಹಾರದ ಮೇಲೆ ನಿಷೇಧ ಹೇರಲು ಸರ್ಕಾರ ಮುಂದಾಗಿದೆ. ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ (ಎಸ್ಐಟಿ) ಶಿಫಾರಸುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೇಂದ್ರ ಸರ್ಕಾರ ಸಜ್ಜಾಗಿದೆ. ಆದಾಗ್ಯೂ ವಾಣಿಜ್ಯೋದ್ಯಮಿಗಳು ಮತ್ತು ವ್ಯಾಪಾರಸ್ಥರ ವಿರೋಧದಿಂದಾಗಿ 15 ಲಕ್ಷ ರೂ.ಗಳ ಮೇಲ್ಪಟ್ಟು ನಗದು ಹಿಡುವಳಿಯನ್ನು ನಿರ್ಬಂಧಿಸಬೇಕೆಂಬ ಎಸ್ಐಟಿಯ ಇತರ ಪ್ರಸ್ತಾವನೆ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲವೆಂದು ಮೂಲಗಳು ತಿಳಿಸಿವೆ.  ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್, ಚೆಕ್ಗಳು ಅಥವಾ ಡ್ರಾಫ್ಟ್ಗಳನ್ನು ಬಳಸಿ 3 ಲಕ್ಷ ರೂ.ಗಳ ಮಿತಿವರೆಗೆ ವ್ಯವಹಾರಗಳನ್ನು ನಡೆಸಬಹುದು. ಇಂಥ ವಹಿವಾಟುಗಳನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂಬುದು ಸರ್ಕಾರದ ಉದ್ದೇಶವಾಗಿದೆ.

ಬೇನಾಮಿ ಹೆಸರಿನಲ್ಲಿ ನಡೆಯುತ್ತಿರುವ ಹಣಕಾಸು ವಹಿವಾಟುಗಳನ್ನು ಸರ್ಕಾರ ಪತ್ತೆ ಮಾಡುತ್ತಿದ್ದರೂ, ನಗದು ರೂಪದಲ್ಲಿ ಆಭರಣಗಳು, ಕಾರುಗಳು ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಹಲವಾರು ದೊಡ್ಡ ಪ್ರಕರಣಗಳು ಬೈಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

► Follow us on –  Facebook / Twitter  / Google+

Facebook Comments

Sri Raghav

Admin