3 ವರ್ಷದ ಮಗುವಿಗೆ ಕಚ್ಚಿದ ಬೀದಿ ನಾಯಿ

ಈ ಸುದ್ದಿಯನ್ನು ಶೇರ್ ಮಾಡಿ

baby

ಬೇಲೂರು, ನ.23- ಪಟ್ಟಣದ ನೆಹರೂ ನಗರದಲ್ಲಿ ಬೀದಿನಾಯಿಯೊಂದು ಮೂರುವರ್ಷದ ಮಗುವಿಗೆ ಕಚ್ಚಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಪಟ್ಟಣದ ನೆಹರು ನಗರದಲ್ಲಿರುವ ಶಿವಜ್ಯೋತಿ ಪಣದ ಬೀದಿಯ ಮನೆಯೊಂದರ ಬಾಗಿಲ ಬಳಿ ನೂತನ್ ಎಂಬ ಮೂರು ವರ್ಷದ ಮಗು ಆಟವಾಡುತಿದ್ದ ಸಂದರ್ಭ ಪರಸ್ವರ ಕಚ್ಚಾಡಿ ಕೊಂಡು ಬೀದಿಯಲ್ಲಿ ಬಂದ ಬೀದಿನಾಯಿಗಳು ಮಗುವನ್ನು ಕಂಡು ಬೊಗಳಲು ಆರಂಭಿಸಿದವು. ನಾಯಿಗಳು ಬೊಗಳಿದ ಶಬ್ದವನ್ನು ಕೇಳಿ ಪೋಷಕರು ಮನೆಯೊಳಗಿನಿಂದ ಮಗುವಿನ ಬಳಿ ಬರುವಷ್ಟರಲ್ಲಿಯೆ ಒಂದು ನಾಯಿ ಮಗುವಿನ ಮೇಲೆ ದಾಳಿಮಾಡಿ ಕೆನ್ನೆ, ತಲೆ ಕೈಯನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಮಗುವಿನ ಸ್ಥಿತಿಯನ್ನು ಕಂಡು ಗಾಬರಿಗೊಂಡ ಪೋಷಕರು ಕೂಡಲೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಾಯಿಯ ದಾಳಿಯಿಂದ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನಲೆಯಲ್ಲಿ ಮಗುವಿಗೆ ತುರ್ತು ಚಿಕಿತ್ಸೆಯನ್ನು ನೀಡಿ ನಂತರ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಗುವಿನ ಪೋಷಕರಾದ ಗುರು ಹಾಗೂ ಬಡಾವಣೆಯ ನಿವಾಸಿಗಳು ಪಟ್ಣಣದ ನೆಹರು ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪ್ರತಿದಿನ ನಾಯಿಗಳ ದಾಳಿಗೆ ಹೆದರಿ ಜೀವನ ಸಾಗಿಸುವಂತಾಗಿದೆ. ನಾಯಿಗಳ ಕಾಟದಿಂದ ಬೀದಿಯಲ್ಲಿ ರಾತ್ರಿ ವೇಳೆ ಮಕ್ಕಳು, ವೃದ್ಧರು, ಮಹಿಳೆಯರು ನಡೆದಾಡುವುದೆ ಕಷ್ಟವಾಗಿದೆ. ನಾಯಿಗಳ ಕಾಟವನ್ನು ತಪ್ಪಿಸುವಂತೆ ಪುರಸಭೆಗೆ ಹಲವಾರು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.ಆದರೆ ಪುರಸಭೆ ಅಧ್ಯಕ್ಷರು ತಮ್ಮ ವಾರ್ಡಿನಲ್ಲಿ ಪುರಸಭೆ ಸಿಬ್ಬಂದಿಗಳು ನಾಯಿ ಹಿಡಿಯುವ ಕಾರ್ಯಕ್ಕೆ ಚಾಲನೆ ನೀಡಿದ್ದು ಬಿಟ್ಟರೆ ಎಲ್ಲೂ ನಾಯಿ ಹಿಡಿಯುವುದು ಕಂಡುಬರುತ್ತಿಲ್ಲ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲೇ ಪುರಸಭೆ ಅಧಿಕಾರಿಗಳು ಎಚ್ಚೆತ್ತು ನೆಹರು ನಗರದ ಜನತೆ ನೆಮ್ಮದಿಯಿಂದ ಓಡಾಡಲು ಮತ್ತು ಜೀವನ ನಡೆಸಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin