3.14 ಕೋಟಿ ರೂ. ವಂಚನೆ : ಮಾಜಿ ಶಾಸಕ ಪುತ್ರ ಸೇರಿ 24 ಮಂದಿ ವಿರುದ್ಧ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

Foaud-01

ಥಾಣೆ, ಡಿ.23- ಬ್ಯಾಂಕ್‍ನ 3.14 ಕೋಟಿ ರೂ. ಹಣವನ್ನು ಲಪಟಾಯಿಸಿದ ಮೇಲೆ ಥಾಣೆ ಜಿಲ್ಲೆಯ ಮಾಜಿ ಶಾಸಕ ಪುತ್ರ ಮತ್ತು ಬ್ಯಾಂಕೊಂದರ ಮಾಜಿ ವ್ಯವಸ್ಥಾಪಕ ಸೇರಿದಂತೆ 24 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕೊಂದರ ಮಾಜಿ ವ್ಯವಸ್ಥಾಪಕ ಇತರರೊಂದಿಗೆ ಶಾಮೀಲಾಗಿ ನಗರಸಭೆ ಅನುಮತಿ ಇಲ್ಲದೇ ಕಲ್ಯಾಣ್ ಡೊಂಬಿವಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ನೌಕರರ ಭವಿಷ್ಯ ನಿಧಿ ಖಾತೆಗಳಿಂದ 2.82 ಕೋಟಿ ರೂ.ಗಳ ನಿಶ್ವಿತ ಠೇವಣಿ ಹಣವನ್ನು ಲಪಟಾಯಿಸಿದ್ದರು.  ಆನಂತರ ಈ ಖದೀಮರು ಈ ಹಣವನ್ನು ಮತ್ತು ನಗರಸಭೆಯ 72 ಲಕ್ಷ ರೂ.ಗಳ ಇನ್ನೊಂದು ಮೊತ್ತವನ್ನು ಬೇರೊಂದು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಕೆಲವು ಉದ್ಯಮಿಗಳು ಮತ್ತು ಕಟ್ಟಡ ನಿರ್ಮಾತೃಗಳ ಪರವಾಗಿ ನಡೆದ ಈ ಅಕ್ರಮ ವ್ಯವಹಾರದಲ್ಲಿ ಬ್ಯಾಂಕ್ ನಿಬಂಧನೆಗಳು ಮತ್ತು ನೀತಿ-ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 2015 ಮತ್ತು ಜೂನ್ 2016ರ ನಡುವೆ ಫಲಾನುಭವಿಗಳೊಂದಿಗೆ ಷಾಮೀಲಾಗಿ ಈ ದೊಡ್ಡ ವಂಚನೆ ಎಸಗಲಾಗಿದೆ. ಬ್ಯಾಂಕ್ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ನಿನ್ನೆ ಈ ಎಲ್ಲ 24 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin