3.77 ಲಕ್ಷ ಕೋಟಿ ವರ್ಷ ಹಿಂದಿನ ಅತ್ಯಂತ ಪ್ರಾಚೀನ ಪಳಿಯುಳಿಕೆ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

fossils

ಲಂಡನ್, ಮಾ.2-ಜೀವ ಜಗತ್ತಿನ ಸೃಷ್ಟಿ ಬಗ್ಗೆ ಕುತೂಹಲಕಾರಿ ಸಂಶೋಧನೆ ನಡೆಯುತ್ತಿರುವಾಗಲೇ, 3.77 ಲಕ್ಷ ಕೋಟಿ ವರ್ಷದ ಅತ್ಯಂತ ಪ್ರಾಚೀನ ಪಳಿಯುಳಿಕೆಯೊಂದು ಪತ್ತೆಯಾಗಿದೆ. ಭೂಮಿಯ ಮೇಲಿನ ಆರಂಭಿಕ ಜೀವಿಗಳ ಅನ್ವೇಷಣೆ ಮೇಲೆ ಇದು ಮಹತ್ವದ ಬೆಳಕು ಚೆಲ್ಲಲ್ಲಿದೆ ಎಂದು ಪ್ರಾಗ್ಜೀವ ವಿಜ್ಞಾನಿಗಳು ಆಶಾಭಾವನೆ ಹೊಂದಿದ್ದಾರೆ.  ಕೆನಡಾದಲ್ಲಿ ಪತ್ತೆಯಾಗಿರುವ ಪ್ರಾಚೀನ ಶಿಲೆಗಳಲ್ಲಿ ಪುಟ್ಟ ಮತ್ತು ನಳಿಕೆಯಾಕಾರದ ವಿನ್ಯಾಸಗಳು ಕಂಡುಬಂದಿದ್ದು, ಇದು ಕೋಟ್ಯಂತರ ವರ್ಷಗಳ ಹಿಂದೆ ಬದುಕಿದ್ದ ಜೀವಿಗಳ ಕುರುಹುಗಳಿರಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ.

ಈ ಪಳಿಯುಳಿಕೆ ಅತ್ಯಂತ ಸೂಕ್ಷ್ಮವಾಗಿದೆ. ಇದು ಮಾನವ ಕೂದಲಿಗಿಂತಲೂ ಸಣ್ಣದಾಗಿದ್ದು, ಬರಿಗಣ್ಣಿಗೆ ಗೋಚರಿಸುವುದಿಲ್ಲ. ಅತ್ಯಂತ ಸುಧಾರಿತ ಸೂಕ್ಷ್ಮದರ್ಶಕದಿಂದ ಮಾತ್ರ ಇದನ್ನು ನೋಡಲು ಸಾಧ್ಯ. 3.77 ಲಕ್ಷ ಕೋಟಿ ವರ್ಷಗಳ ಹಿಂದೆ ಇಳೆಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಜೀವಿಗಳಿಗೆ ಇದು ಸೇರಿದ್ದಾಗಿದೆ ಎಂದು ನಂಬಲಾಗಿದೆ. ಈ ಪಳಿಯುಳಿಕೆ ಈಗ ಪ್ರಾಚೀನ ಜೀವಿಗಳ ಅಧ್ಯಯನ ನಡೆಸುವ ವಿಜ್ಞಾನಿಗಳಿಗೆ ಸಂಶೋಧನೆಯ ಅಮೂಲ್ಯ ಸರಕಾಗಿದೆ.  ಈ ಕೋಟ್ಯಂತರ ವರ್ಷಗಳ ಅವಧಿಯಲ್ಲಿ ಪ್ರತಿಕೂಲ ಹವಾಮಾನ, ಭೂ ಮೇಲ್ಮೈಗಳ ಸವಕಳಿ, ಅವನತಿ ಮತ್ತು ಶಿಲಾ ಪರಿವರ್ತನೆಯ ವಿರೂಪಗಳ ನಡುವೆಯೂ ಈ ವಿರಳಾತಿ ವಿರಳ ಪಳಿಯುಳಿಕೆ ಪತ್ತೆಯಾಗಿದ್ದು, ಇದು ಯಾವ ಜೀವ ಸಂಕುಲಕ್ಕೆ ಸೇರಿದ್ದೆಂಬ ಅನ್ವೇಷಣೆಗಳು ಮುಂದುವರಿದಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin