ಕೊರೊನಾ ಲಸಿಕೆ ಕುರಿತು ಮಹತ್ವದ ಸುಳಿವು ಕೊಟ್ಟ ಪ್ರಧಾನಿ ಮೋದಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.15- ಡೆಡ್ಲಿ ಕೊರೊನಾ ವೈರಸ್ ಸೋಂಕು ನಿಗ್ರಹಕ್ಕಾಗಿ ಮೂರು ಪ್ರಮುಖ ಲಸಿಕೆಗಳು ವಿವಿಧ ಪ್ರಾಯೋಗಿಕ ಹಂತಗಳಲ್ಲಿದ್ದು, ಅತಿ ಶೀಘ್ರದಲ್ಲೇ ದೇಶದ ಜನತೆಗೆ ಲಭ್ಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಘೋಷಿಸಿದ್ದಾರೆ.

74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಇಂದು ಬೆಳಗ್ಗೆ ರಾಷ್ಟ್ರೀಯ ತ್ರಿವರ್ಣ ದ್ವಜಾರೋಹಣ ನೆರವೇರಿಸಿ ಪ್ರಧಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಕೊರೊನಾ ವಿರುದ್ಧ ಹೋರಾಡುತ್ತಾ ಜನರ ಜೀವಗಳನ್ನು ರಕ್ಷಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೋವಿಡ್ ವಾರಿಯರ್ಸ್‍ಗಳ ಸಮರ್ಪಣಾ ಮತ್ತು ತ್ಯಾಗ ಮನೋಭಾವದ ಸೇನೆಗಳನ್ನು ಪ್ರಶಂಸಿಸಿದರು.

ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಲಸಿಕೆ ಮತ್ತು ಔಷ-ಮಾತ್ರೆಗಳು ಯಾವಾಗ ಸಿದ್ದವಾಗಿ ನಮಗೆ ಲಭಿಸುತ್ತದೆ ಎಂದು ರಾಷ್ಟ್ರದ ಜನತೆ ಕೇಳುತ್ತಿದ್ದಾರೆ ಮತ್ತು ಅದರ ಲಭ್ಯತೆ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ.

ನಮ್ಮ ವಿಜ್ಞಾನಿಗಳು ಮತ್ತು ಸಂಶೋಧಕರು ಈ ನಿಟ್ಟಿನಲ್ಲಿ ಅಹರ್ನಿಶಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಗತಿ ಕಂಡುಬಂದಿದೆ ಎಂದು ಮೋದಿ ಹೇಳಿದರು.

ಭಾರತದಲ್ಲಿ ಮೂರು ಲಸಿಕೆಗಳು ವಿವಿಧ ಪ್ರಾಯೋಗಿಕ ಹಂತಗಳಲ್ಲಿವೆ. ಅವುಗಳ ಅಂತಿಮ ಉತ್ಪಾದನೆ ಮತ್ತು ಪೂರೈಕೆಗೆ ನೀಲನಕ್ಷೆ ಸಿದ್ಧವಾಗುತ್ತಿದೆ ಎಂದು ಅವರು ತಿಳಿಸಿದರು.

ಈ ನಿಟ್ಟಿನಲ್ಲಿ ಪ್ರಯೋಗ ನಿರಂತರವಾಗಿ ನಡೆಯುತ್ತಿದೆ. ವಿಜ್ಞಾನಿಗಳು ಅಂತಿಮ ಪ್ರಯೋಗ ನಡೆಸಿದ ನಂತರ ಶೀಘ್ರದಲ್ಲೇ ಇದರ ಉತ್ಪಾದನೆ ಮತ್ತು ವಿತರಣೆ ನಡೆಯುತ್ತದೆ. ಸದ್ಯದಲ್ಲೇ ಇದು ಲಭ್ಯವಾಗುತ್ತದೆ ಎಂದು ಅವರು ಹೇಳಿದರು.

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಕೇವಲ ಒಂದು ಪರೀಕ್ಷಾ ಪ್ರಯೋಗಾಲಯ ಮಾತ್ರ ಇದು. ಈಗ ಅದು 1,400 ಲ್ಯಾಬ್‍ಗಳಿಗೂ ಹೆಚ್ಚಾಗಿದೆ. ಅದೇ ರೀತಿ ದಿನಕ್ಕೆ ಸರಾಸರಿ 7 ಲಕ್ಷಕ್ಕೂ ಅಕ ಸ್ಯಾಂಪಲ್‍ಗಳನ್ನು ಪರೀಕ್ಷಿಸುವ ಸಾಮಥ್ರ್ಯ ವೃದ್ದಿಯಾಗಿದೆ ಎಂದು ಮೋದಿ ವಿವರಿಸಿದರು.

ಕೊರೊನಾ ಪಿಡುಗಿನ ವಿರುದ್ಧ ನಾವೆಲ್ಲರೂ ಧೈರ್ಯವಾಗಿ ಹೋರಾಡುತ್ತಿದ್ದೇವೆ. ಈ ಯುದ್ಧದಲ್ಲಿ ಜಯ ನಮಗೆ ಖಚಿತ ಎಂದು ಅವರು ಪುನರುಚ್ಚರಿಸಿದರು.

ಕೊರೊನಾ, ಪ್ರವಾಹ, ಭೂಕಂಪ ಏನೇ ಬರಲಿ ದೇಶದ ಜನರು ಆತ್ಮವಿಶ್ವಾಸ ಮತ್ತು ಧೈರ್ಯ ಕಳೆದುಕೊಂಡಿಲ್ಲ. ಸದೃಢ ಮನಸ್ಸಿನಿಂದ ಮುನ್ನುಗ್ಗುತ್ತಿದ್ದಾರೆ. ದೇಶದ 130 ಕೋಟಿ ಜನರು ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟುತ್ತಿದ್ದಾರೆ ಎಂಬ ಹೆಮ್ಮೆ ನನಗಿದೆ ಎಂದು ಪ್ರಧಾನಿ ತಿಳಿಸಿದರು.

ಕೊರೊನಾ ಹೆಮ್ಮಾರಿಯಿಂದ ದೇಶದ ಉಜ್ವಲ ಭಿವಿಷ್ಯಕ್ಕೆ ಅಡ್ಡಿಯಾಗಿದೆ. ನಾವು ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಈ ಸಂದರ್ಭದಲ್ಲಿ ವೈದ್ಯರು, ನರ್ಸ್‍ಗಳು ಮತ್ತು ಆಶಾ ಕಾರ್ಯಕರ್ತೆಯರೂ ಸೇರಿದಂತೆ ಕೊರೊನಾ ವಾರಿಯರ್ಸ್‍ಗಳ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕು.

ದೇಶವನ್ನು ಮತ್ತು ರಾಷ್ಟ್ರದ ಜನರನ್ನು ಆರೋಗ್ಯವಾಗಿಡಲು ಅನೇಕ ಜನರು ಪ್ರಾಣ ತೆತ್ತಿದ್ದಾರೆ ಅವರನ್ನು ನಾವು ಸ್ಮರಿಸಬೇಕೆಂದು ಮೋದಿ ಹೇಳಿದರು.

Facebook Comments

Sri Raghav

Admin