3 ಮೊಟ್ಟೆಗೆ 1672 ರೂ. ಬಿಲ್..! ಇದು ಸ್ಟಾರ್ ಹೊಟೇಲ್‍ ಅಲ್ಲ ಬ್ಲೇಡ್ ಹೋಟೆಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ. 15- ಸ್ಟಾರ್ ಹೋಟೆಲ್‍ಗಳ ಎಡವಟ್ಟು ಮತ್ತೆ ಮತ್ತೆ ನಗೆಪಾಟಲಿಗೆ ಈಡಾಗುತ್ತಲೇ ಇರುವುದು ಅಂತರ್ಜಾಲದಲ್ಲಿ ಕಂಡುಬರುತ್ತಲೇ ಇದೆ ಈಗ ಮತ್ತೆ ಅದೇ ರೀತಿಯ ಎಡವಟ್ಟು ಬೆಳಕಿಗೆ ಬಂದಿದೆ.

ಬಾಲಿವುಡ್‍ನ ಸ್ಟಾರ್ ಸಂಗೀತ ನಿರ್ದೇಶಕ ಶೇಖರ್ ರವಿಜಿಯಾನಿ ಇತ್ತೀಚೆಗೆ ಅಹಮದಾಬಾದ್‍ನ ಹಯಾತ್ ರೆಜೆಯೆನ್ಸಿ ಎಂಬ ಸ್ಟಾರ್ ಹೊಟೇಲ್‍ನಲ್ಲಿ ತಂಗಿದ್ದಾಗ 3 ಬೇಯಿಸಿದ ಕೋಳಿಮೊಟ್ಟೆಯನ್ನು ಆರ್ಡರ್ ಮಾಡಿದ್ದಾರೆ.

ಬಿಲ್‍ನಲ್ಲಿ 3 ಕೋಳಿಮಟ್ಟೆಗೆ 1672 ರೂ. ಬಿಲ್ ಮಾಡಿರುವುದನ್ನು ನೋಡಿ ಆಶ್ಚರ್ಯಗೊಂಡ ಶೇಖರ್ ಆ ಬಿಲ್‍ನ ಪ್ರತಿಯನ್ನು ಅಂತರ್ಜಾಲಕ್ಕೆ ಹರಿಬಿಟ್ಟಿದ್ದಾರೆ.ಈಗ ಈ ಸಂದೇಶವು ವೈರಲ್ ಆಗಿದ್ದು ಅದಕ್ಕೆ ರೀಟ್ವೀಟ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದುಬರುತ್ತಿದೆ.

ಶೇಖರ್ ರವಿಜಿಯಾನಿ ನೀರ್ಜಾ ಎಂಬ ಚಿತ್ರದಲ್ಲಿ ನಟಿಸಿರುವುದೇ ಅಲ್ಲದೆ ವಾರ್, ಭರತ್, ಟೈಗರ್ ಜಿಂದಾ ಹೈ, ಸುಲ್ತಾನ್ ಮುಂತಾದ 60 ಚಿತ್ರಗಳಿಗೆ ಸಂಗೀತ ನೀಡರುವುದೇ ಅಲ್ಲದೆ, 40ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಟ ರಾಹುಲ್‍ಬೋಸ್‍ಗೆ ಚಂದೀಘಡದ ಸ್ಟಾರ್ ಹೋಟೇಲ್‍ನವರು 2 ಬಾಳೆಹಣ್ಣಿಗೆ 442.50 ರೂ.ಗಳ ಬಿಲ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Facebook Comments