ಅರಣ್ಣೀಕರಣದ ಜಾಗದಲ್ಲಿ ಹುಲ್ಲು ಮೇಯ್ದ ಮೇಕೆಗಳ ಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಜು.27- ಮನುಷ್ಯರು ಅಪರಾಧ ಮಾಡಿದರೆ ಬಂಧಿಸಿರುವುದನ್ನು ಕೇಳಿದ್ದೇವೆ. ಆದರೆ ಪ್ರಾಣಿಗಳು ಅಪರಾಧ ಮಾಡಿವೆ ಎಂದು ಬಂಧಿಸಿ ದಂಡ ವಿಧಿಸುವ ಅಪರೂಪದ ಪ್ರಸಂಗವೊಂದು ತೆಲಾಂಗಣ ದಲ್ಲಿ ನಡೆದಿದೆ.

15 ಮೇಕೆಗಳು ಮುನಿಸಿಪಲ್ ಅಧಿಕಾರಿಗಳನ್ನು ಲೆಕ್ಕೆಸದೆ ಹುಲ್ಲು ಮೇಯುತ್ತಿದ್ದಕ್ಕೆ ಇವುಗಳನ್ನು ಹಿಡಿದು ಕಸ್ಟಡಿಗೆ ಒಪ್ಪಿಸಲಾಗಿದೆ.

ತೆಲಂಗಾಣ ದ ಬದೃದ್ರಿಯಕೋಟಗೊಡೆಂ ಜಿಲ್ಲೆಯ ಯಲ್ಲಂದು ಗ್ರಾಮದ ಪ್ರದೇಶವೊಂದರಲ್ಲಿ ಅರಣ್ಣೀಕರಣದ ಭಾಗವಾಗಿ ಸಸಿಗಳನ್ನೂ ನೆಡಲಾಗಿತ್ತು.

ಈ ಮೇಕೆಗಳು ಏಕಾಏಕಿ ನುಗ್ಗಿ ಹುಲ್ಲು ಮೇಯುತ್ತಿದ್ದವು. ಈ ಕಾರಣಕ್ಕಾಗಿ ಮುನಿಸಿಪಲ್ ಅಧಿಕಾರಿಗಳು ಇವುಗಳನ್ನು ವಶಕ್ಕೆ ಪಡೆದು ಪ್ರತಿ ಮೇಕೆಗೂ ತಲಾ 3000 ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin