ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಪಿಕ್ ಅಪ್ ವಾಹನ ಪಲ್ಟಿ, ಸ್ಥಳದಲ್ಲಿಯೇ ಮೂವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು : ಚಾಲಕನ ಅಜಾಗರುಕತೆಗೆ ನಿಯಂತ್ರಣ ತಪ್ಪಿದ ಬೊಲೆರೋ ಪಿಕ್ ಅಪ್ ವಾಹನ ಪಲ್ಟಿಯಾಗಿ ಸ್ಥಳದಲ್ಲಿಯೇ ಮೂವರು ಸಾವನ್ನಾಪ್ಪಿದ್ದು 15 ಮಂದಿಗೆ ಗಾಯಗೊಂಡಿರುವ ಘಟನೆ ಹನೂರು ಪೊಲೀಸ್ ಠಾಣೆ ಬಸವಣ ಗುಡಿ ಸಮೀಪ ಜೆ.ವಿಲೇಜ್ ಕ್ರಾಸ್ ನಲ್ಲಿ ಜರುಗಿದೆ.

ಹನೂರು ತಾಲೋಕಿನ ಲೊಕ್ಕನಹಳ್ಳಿ ಹೋಬಳಿ ಬೈಲೂರು ಗ್ರಾ.ಪಂ. ವ್ಯಾಪ್ತಿಯ ಹುಣಸೇಪಾಳ್ಯ ಗ್ರಾಮ ನಿವಾಸಿ ಪರಿಶಿಷ್ಟ ಜಾತಿ ಜನಾಂಗದ ಚಿಕ್ಕಸಿದ್ದಮ್ಮ( 55), ನಂಜುಂಡಯ್ಯ (60), ಸೀಮೆಎಣ್ಣೆ ನಾಗ(55) ಎಂಬುವವರು ಮೃತ ದುಧೈ9ವಿಗಳು.

ಹನೂರು ತಾಲ್ಲೂಕು ಹುಣಸೇಪಾಳ್ಯ ಗ್ರಾಮದಿಂದ ಕೊಳ್ಳೇಗಾಲ ತಾಲ್ಲೂಕು ಮಧುವನ ಹಳ್ಳಿಕ್ಕೆ ಗ್ರಾಮಕ್ಕೆ ಮದುವೆಗೆ ತೆರಳಿದ್ದು ವಾಪಾಸ್ ಬರುವಾಗ ಚಾಲಕನ ಅತಿ ವೇಗದಿಂದ ನಿಯಂತ್ರಣ ತಪ್ಪಿದ ವಾಹನ ಬಸವನ ಗುಡಿ ಜೆ.ವಿಲೇಜ್ ಸಮೀಪ ತಿರುವಿನಲ್ಲಿ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತ ಪಟ್ಟಿದ್ದಾರೆ. ಹಾಗೂ ಗಾಯಗೊಂಡ 15 ಮಂದಿಯನ್ನು ಕೊಳ್ಳೇಗಾಲದ ಸಕಾ9ರಿ ಆಸ್ಪತ್ರೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ಸುದ್ದಿ ತಿಳಿದ ತಕ್ಷಣ ಹನೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿನಾಯಕ ಹಾಗೂ ಸಿಬ್ಬಂಧಿ ವಗ9ದವರು ಸ್ಥಳಾಕ್ಕಾಗಮಿಸಿ ಪರಿಸ್ಥಿತಿ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದರು.

ಹನೂರು ಶಾಸಕ ಆರ್.ನರೇಂದ್ರ ಮತ್ತು ಕೊಳ್ಳೇಗಾಲ ಡಿವೈಎಸ್ಪಿ ನವೀನ್ ಕುಮಾರ್ ಸ್ಥಳಕ್ಕೆ ಬೇಟಿ ಪರಿಶೀಲಸಿ ಮಾಹಿತಿ ಪಡೆದರು. ಈ ವೇಳೆ ಹನೂರು ವೃತ್ತ ನಿರೀಕ್ಷಕ ರವಿನಾಯಕ್ ಮತ್ತು ಬೈಲೂರು ಗ್ರಾ.ಪಂ.ಅಧ್ಯಕ್ಷ ಭಾಗ್ಯಕೆಂಪಣ್ಣ ಹಾಜರಿದ್ದರು.

Facebook Comments

Sri Raghav

Admin